ಚಿಕ್ಕೋಡಿ :ಮಾಸ್ಕ್ ಹಾಕಿಕೊಳ್ತೀರೋ ಅಥವಾ ವೆಂಟಿಲೇಟರ್ ಹಾಕಿಕೊಳ್ತೀರೋ.. ನಿರ್ಧಾರ ನಿಮ್ಮ ಕೈಯಲ್ಲೇ ಇದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಇನ್ನೇನು 3ನೇ ಹಂತ ತಲುಪಲಿದೆ. ಕೊರೊನಾ ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. 4ನೇ ಹಂತ ತಲುಪುವುದರೊಳಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರೆ ಕೊಟ್ಟರು.