ಕರ್ನಾಟಕ

karnataka

ETV Bharat / state

ವಿಟಿಯು ವಿಭಜಿಸುವುದಾದರೆ ರಾಜ್ಯವನ್ನೂ ವಿಭಜಿಸಿ: ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ - ಬೆಳಗಾವಿ

ಬೆಳಗಾವಿಯ ವಿಟಿಯು ವಿಭಜನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ  ಜಾಥಾ ನಡೆಯಿತು.

ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ  ಜಾಥಾ

By

Published : Feb 16, 2019, 1:57 PM IST

ಬೆಳಗಾವಿ: ದೇಶದ ಮೊದಲ ತಾಂತ್ರಿಕ ವಿವಿ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳಗಾವಿಯ ವಿಟಿಯು ವಿಭಜನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.


ನಗರದ ಬೋಗಾರವೇಸ್​ನಿಂದ ಆರಂಭವಾದ ಜಾಥಾ ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ ಮಾರ್ಗವಾಗಿ ಡಿಸಿ ಕಚೇರಿ ತಲುಪಿತು.
ಬೆಳಗಾವಿಯ ಬಹುತೇಕ ತಾಂತ್ರಿಕ ವಿವಿ ಹಾಗೂ ಪಾಲಿಟೆಕ್ನಿಕ್​ನ ಸಾವಿರಾರು ವಿದ್ಯಾರ್ಥಿಗಳು, ಮಠಾಧೀಶರು ಹಾಗೂ ಕನ್ನಡ ಪರ ಸಂಘಟನೆ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಇನ್ನೂ ಜಾಥಾದ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ವಿವಿ ವಿಭಜಿಸಿ ಹಾಸನದಲ್ಲಿ ಮತ್ತೊಂದು ವಿವಿ ಸ್ಥಾಪನೆ ನಿರ್ಧಾರ ಕೈಬಿಡಬೇಕು. ಒಂದು ವೇಳೆ ವಿವಿ ವಿಭಜಿಸುವುದೇ ಆದರೆ ರಾಜ್ಯವನ್ನು ವಿಭಜಿಸಬೇಕು ಎಂದು ಪ್ರತಿಭಟನಾನಿರತರು ಸರ್ಕಾರವನ್ನು ಒತ್ತಾಯಿಸಿದರು.


ABOUT THE AUTHOR

...view details