ಕರ್ನಾಟಕ

karnataka

ETV Bharat / state

ಮನೆ ಕಟ್ಟಿಸಿಕೊಳ್ಳಲು ಪರಿಹಾರ ಕೊಡದಿದ್ರೆ, ಸರ್ಕಾರವನ್ನೇ ದಬ್ಬಿ ಕೆಡವುತ್ತೇನೆ: ಬಾಲಚಂದ್ರ ‌ಜಾರಕಿಹೊಳಿ - ಸರ್ಕಾರ ಉರಳಿಸುವ ಮಾತು

ಅರಂಬಾವಿ ವಿಧಾನಸಭಾ ಕ್ಷೇತ್ರದ ತಿಗಡಿ ಗ್ರಾಮದಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದ ವೇಳೆ ಸಂತ್ರಸ್ತರಿಗೆ ಸಾಂತ್ವನ ಹೇಳುವ ಭರದಲ್ಲಿ ಸರ್ಕಾರ ಉರಳಿಸುವ ಮಾತನ್ನು ಬಾಲಚಂದ್ರ ಜಾರಕಿಹೊಳಿ ಆಡಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.

ಬಾಲಚಂದ್ರ ‌ಜಾರಕಿಹೊಳಿ

By

Published : Aug 13, 2019, 4:29 PM IST

Updated : Aug 13, 2019, 4:53 PM IST

ಬೆಳಗಾವಿ:ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡದಿದ್ದರೆ ಸರ್ಕಾರವನ್ನ ಗುದ್ದಿ ಕೆಡವುತ್ತೇನೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

ಅರಂಬಾವಿ ವಿಧಾನಸಭಾ ಕ್ಷೇತ್ರದ ತಿಗಡಿ ಗ್ರಾಮದಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದ ವೇಳೆ ಸಂತ್ರಸ್ತರಿಗೆ ಸಾಂತ್ವನ ಹೇಳುವ ಭರದಲ್ಲಿ ಸರ್ಕಾರ ಉರಳಿಸುವ ಮಾತು ಆಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಾಲಚಂದ್ರ ‌ಜಾರಕಿಹೊಳಿ

ಪ್ರವಾಹದಿಂದ ಕುಸಿತ ಕಂಡಿರುವ ನಿಮ್ಮೆಲ್ಲರಿಗೂ ಸೂರು ಕಟ್ಟಿಸಿಕೊಡಲು ಪ್ರಾಮಾಣಿಕ ‌ಪ್ರಯತ್ನ ಮಾಡುತ್ತೇನೆ. ಮನೆ ಕಟ್ಟಿಕೊಳ್ಳಲು ನಿಮಗೆ ನೆರವು ನೀಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ ಎಂದು ಹೇಳಿದ್ದಾರೆ.

Last Updated : Aug 13, 2019, 4:53 PM IST

ABOUT THE AUTHOR

...view details