ಬೆಳಗಾವಿ: ಸಚಿವ ಸಂಪುಟ ಒಂದು ವರ್ಷದ ಹಿಂದೆ ಆಗಿದ್ದರೆ ಅದಕ್ಕೆ ಅರ್ಥ ಇತ್ತು. ಈಗಾಗಲೇ ಕಾಲಾವಧಿ ಮುಗೀತಾ ಬರ್ತಿದೆ. ನಾನು ಸಂಪುಟ ಸೇರುವ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಶಾಸಕ ಸಿ ಪಿ ಯೋಗೇಶ್ವರ್ ಹೇಳಿದರು. ಬೆಳಗಾವಿ ಖಾಸಗಿ ಹೊಟೇಲ್ನ ಸಭಾಭವನದಲ್ಲಿ ಮಾಧ್ಯಮಗಳ ಜತೆಗ ಅವರು ಮಾತನಾಡಿದರು. ಇನ್ನೇನು ಚುನಾವಣೆ ಮೂರು ತಿಂಗಳು ಮಾತ್ರ ಉಳಿದಿದೆ. ಮುಂದಿನ ಚುನಾವಣೆಯ ತಯಾರಿ ಮಾಡ್ಕೋಬೇಕು.
ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಪಕ್ಷ ಏನೂ ನಿರ್ಧರಿಸುತ್ತಿದೆಯೋ ಅದಕ್ಕೆ ಬದ್ಧವಾಗಿದ್ದೇನೆ. ಈಗಾಗಲೇ ಮೂರು ಬಾರಿ ಸ್ಬಲ್ಪ ದಿನಗಳ ಕಾಲ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಸಚಿವ ಸ್ಥಾನ ಕೊಟ್ಟರೆ ಸಮರ್ಪಕವಾಗಿ ನಿಭಾಯಿಸುವೆ ಎಂದು ಅಭಿಮತ ವ್ಯಕ್ತಪಡಿಸಿದರು.