ಕರ್ನಾಟಕ

karnataka

ETV Bharat / state

30 ವರ್ಷದ ಸೇವೆಯೇ ಉಪಚುನಾವಣೆಯಲ್ಲಿ ನಾನು ಗೆಲ್ಲುವಂತೆ ಮಾಡುತ್ತೆ : ಸತೀಶ್‌ ಜಾರಕಿಹೊಳಿ - ಬೆಳಗಾವಿ ಲೋಕಸಭಾ ಉಪ ಚುನಾವಣೆ

ಕಳೆದ ವರ್ಷದಂತೆ ಈಗ ಆಗಬಾರದು, ತಜ್ಞರ ಸಲಹೆ ಪಡೆಯಬೇಕು. ಲಾಕ್‌ಡೌನ್‌ದಿಂದ ಜನರಿಗೆ ತೊಂದರೆಯಾಗಿದೆ. ವಿಪಕ್ಷ ನಾಯಕ ಸಿದರಾಮಯ್ಯ ಹೇಳಿದ ಹಾಗೆ ಲಾಕ್‌ಡೌನ್ ಮೊದಲು ಜನಸಾಮಾನ್ಯರ ಖಾತೆಗೆ ₹10 ಸಾವಿರ ಹಾಕುವುದು ಯೋಗ್ಯ..

Satish jarakiholi
ಸತೀಶ ಜಾರಕಿಹೊಳಿ

By

Published : Apr 17, 2021, 7:23 PM IST

ಗೋಕಾಕ್​ : ಕಳೆದ ಹಲವಾರು ವರ್ಷಗಳಿಂದ ರಾಜಕೀಯದಲ್ಲಿ‌ ಮಾಡಿರುವ ಕೆಲಸಗಳನ್ನು ನೋಡಿ ನನಗೆ ಜನ ಮತ ಹಾಕಿದ್ದಾರೆ. ಉಪಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎಂದು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋಕಾಕ್​ನ ಜೆಆರ್​ಬಿಸಿ ಹಿಂದಿನ ಸರ್ಕಾರಿ ಶಾಲೆ ಮತಗಟ್ಟೆ 162ರಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಮತದಾನ ಶೇಕಡಾವಾರು ಕಡಿಮೆಯಾದರೂ ಸಹಿತ ಏನೂ ಆಗುವುದಿಲ್ಲ, ಕಾಂಗ್ರೆಸ್ ಗೆಲ್ಲುತ್ತದೆ. ಮತದಾನ ಎಷ್ಟು ಹೆಚ್ಚಾದರೂ ಕಡಿಮೆಯಾದರೂ ವ್ಯತ್ಯಾಸ ಆಗುವುದಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಅವರಿಗೆ ಗೆಲುವಿನ ವಿಶ್ವಾಸ..

ಲಖನ್​ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಯಾವುದೇ ಪಕ್ಷ ಆಯ್ಕೆ ಮಾಡಲು ಸ್ವತಂತ್ರರು. ನಾನೂ ಮಾಡಿರುವ ಕೆಲಸ ನೋಡಿ ಜನ ನನಗೆ ಮತ ಹಾಕಿದ್ದಾರೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ರಾಜಕೀಯ ನಾಯಕರಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಕಳೆದ ವರ್ಷದಂತೆ ಈಗ ಆಗಬಾರದು, ತಜ್ಞರ ಸಲಹೆ ಪಡೆಯಬೇಕು. ಲಾಕ್‌ಡೌನ್‌ದಿಂದ ಜನರಿಗೆ ತೊಂದರೆಯಾಗಿದೆ. ವಿಪಕ್ಷ ನಾಯಕ ಸಿದರಾಮಯ್ಯ ಹೇಳಿದ ಹಾಗೆ ಲಾಕ್‌ಡೌನ್ ಮೊದಲು ಜನಸಾಮಾನ್ಯರ ಖಾತೆಗೆ ₹10 ಸಾವಿರ ಹಾಕುವುದು ಯೋಗ್ಯ ಎಂದರು.

ABOUT THE AUTHOR

...view details