ಚಿಕ್ಕೋಡಿ: ಎಂಟು ಬಾರಿ ನಾಮಪತ್ರ ಸಲ್ಲಿಕೆ ಮಾಡಿ ಏಳು ಬಾರಿ ವಿಜಯಶಾಲಿಯಾಗಿದ್ದೇನೆ. ಏಳು ಬಾರಿ ಗೆದ್ದವನಿಗೆ ಎಂಟನೇ ಬಾರಿ ಗೆಲ್ಲುವುದೇನು ದೊಡ್ಡ ವಿಷಯ ಅಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
7 ಬಾರಿ ಗೆದ್ದವನಿಗೆ 8ನೇ ಬಾರಿ ಗೆಲ್ಲುವುದೇನು ದೊಡ್ಡ ವಿಷಯವಲ್ಲ: ಪ್ರಕಾಶ್ ಹುಕ್ಕೇರಿ - ಸಿಎಂ ಕುಮಾರಸ್ವಾಮಿ
2018ರಲ್ಲಿ ಈ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದಿದ್ದರು. ಅವರು ಬಂದು ಹೋದ ಮೇಲೆ ಮತ್ತೆ ಎರಡು ಕ್ಷೇತ್ರದಲ್ಲಿ ಹೆಚ್ಚಿನ ಸೀಟುಗಳು ಕಾಂಗ್ರೆಸ್ಗೆ ಬಂದಿವೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅವರ ಹವಾ ಇಲ್ಲ ಎಂದು ಮೋದಿ ಬಗ್ಗೆ ಪ್ರಕಾಶ್ ಹುಕ್ಕೇರಿ ವ್ಯಂಗ್ಯವಾಡಿದರು.
ಚಿಕ್ಕೋಡಿ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 1988ರಲ್ಲಿ ವಿಧಾನ ಪರಿಷತ್ ಸದಸ್ಯನಾಗಿ, 1994 - 2013ರವರೆಗೆ ಆರು ಬಾರಿ ವಿಧಾನಸಭಾ ಸದಸ್ಯನಾಗಿ ಹಾಗೂ 2014ರಲ್ಲಿ ಲೋಕಸಭಾ ಸದಸ್ಯನಾಗಿ ನಾಮಪತ್ರ ಸಲ್ಲಿಸಿದ್ದೇನೆ. 2019ರಲ್ಲಿ ಎಂಟನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾನು ಸೊಲ್ಲಿಲದ ಸರದಾರ. ನಾನು ಮತ್ತೆ ಈ ಬಾರಿ ವಿಜಯಶಾಲಿಯಾಗಿ ಜನರ ಸೇವೆ ಮಾಡುತ್ತೇನೆ ಎಂದರು.
ಪ್ರಚಾರಕ್ಕಾಗಿ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಬರಲಿದ್ದಾರೆ. 2018ರಲ್ಲಿ ಈ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದಿದ್ದರು. ಅವರು ಬಂದು ಹೋದ ಮೇಲೆ ಮತ್ತೆ ಎರಡು ಕ್ಷೇತ್ರದಲ್ಲಿ ಹೆಚ್ಚಿನ ಸೀಟುಗಳು ಕಾಂಗ್ರೆಸ್ಗೆ ಬಂದಿವೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅವರ ಹವಾ ಇಲ್ಲ. ಮತ್ತೆ ಗೆಲುವು ನಮ್ಮದೇ ಎಂದು ಹೇಳಿದರು.