ಬೆಳಗಾವಿ:ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನಾ ಸ್ಥಳಕ್ಕೆ ಸಹೋದರ ಹೋಗುವವರೆಗೂ ಮೃತದೇಹದ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ಪತ್ನಿ ಜಯಶ್ರೀ ಪಾಟೀಲ ಪಟ್ಟು ಹಿಡಿದಿದ್ದಾರೆ. ಬೆಳಗಾವಿಯ ಸಮರ್ಥ ನಗರದ ಮನೆಗೆ ಜಯಶ್ರೀ ಬರುತ್ತಿದ್ದಂತೆ ಅವರೊಂದಿಗೆ ನಗರದ ಕ್ಯಾಂಪ್ ಪೊಲೀಸರು ಮಾತುಕತೆ ನಡೆಸಿದರು.
'ಸಹೋದರ ಘಟನಾ ಸ್ಥಳಕ್ಕೆ ಹೋಗುವ ಮುನ್ನ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲ್ಲ' - ಗಂಡನ ಸಹೋದರ ಸ್ಥಳಕ್ಕೆ ತೆರಳುವವರೆಗೂ ಲಾಡ್ಜ್‌ನಿಂದ ಮೃತದೇಹ ಸ್ಥಳಾಂತರ ಬೇಡ
ಗಂಡನ ಸಹೋದರ ಸ್ಥಳಕ್ಕೆ ತೆರಳುವವರೆಗೂ ಲಾಡ್ಜ್‌ನಿಂದ ಮೃತದೇಹ ಸ್ಥಳಾಂತರ ಬೇಡ ಎಂದು ಜಯಶ್ರೀ ಬೆಳಗಾವಿಯ ಕ್ಯಾಂಪ್ ಪೊಲೀಸರಿಗೆ ತಿಳಿಸಿದರು.
ಜಯಶ್ರೀ
ಬರಿಗೈಯಲ್ಲಿ ತೆರಳಿದ ಪೊಲೀಸರು:ನಾವು ಹೋಗುವವರೆಗೆ ಅವರ ಮೃತದೇಹ ಲಾಡ್ಜ್‌ನಲ್ಲಿಯೇ ಇರಲಿ ಎಂದು ಜಯಶ್ರೀ ಹೇಳಿದ್ದಾರೆ. ಈ ಮೂಲಕ ಗಂಡನ ಮೃತದೇಹ ಸ್ಥಳಾಂತರಕ್ಕೆ ಅನುಮತಿ ನಿರಾಕರಿಸಿದರು. ಪತಿ ಮೃತದೇಹ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆಗೆ ಯಾವುದೇ ಅಭ್ಯಂತರ ಇಲ್ಲ ಎಂದು ಲಿಖಿತ ಅನುಮತಿ ಪಡೆಯಲು ಕ್ಯಾಂಪ್ ಪೊಲೀಸರು ಬಂದಿದ್ದರು. ಸಂತೋಷ ಪಾಟೀಲ್ ನಿವಾಸಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ:ಗುತ್ತಿಗೆದಾರ ಆತ್ಮಹತ್ಯೆ ಕೇಸ್ನಲ್ಲಿ ತನಿಖೆ ನಡೆದ್ರೂ ಪ್ರಯೋಜನವಿಲ್ಲ: ಖರ್ಗೆ
Last Updated : Apr 12, 2022, 10:55 PM IST