ಅಥಣಿ:ಬಿಜೆಪಿಯವರುಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನಸಾಮಾನ್ಯರ ಬದುಕು ಕಿತ್ತುಕೊಂಡು ದೇಶವನ್ನು ಆಳುತ್ತಿದ್ದಾರೆಂದು ಮಾಜಿ ಸಚಿವ ಎಂಬಿ ಪಾಟೀಲ್ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಎಸ್ವೈ ಗೊತ್ತು ಗುರಿಯಿಲ್ಲದೇ ಸರ್ಕಾರ ನಡೆಸುತ್ತಿದ್ದಾರೆ, ಯಾವುದೇ ಸಚಿವರಿಗೂ ತಮ್ಮ ಕಾರ್ಯದ ಬಗ್ಗೆ ಅರಿವಿಲ್ಲ ಎಂದು ಹರಿಹಾಯ್ದರು.