ಬೆಳಗಾವಿ:ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ. ಯಾವುದೇ ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೋಡಿಮಠ ಶ್ರೀ, ಮೇ. 23ರವರೆಗೆ ನಾನು ರಾಜಕೀಯ ಭವಿಷ್ಯ ನುಡಿಯಲ್ಲ ಎಂದಿದ್ದೇಕೆ? - undefined
ಮೇ. 23ರವರೆಗೆ ನಾನು ಏನೂ ಮಾತನಾಡಲ್ಲ. ಯಾವುದೇ ರಾಜಕೀಯ ಭವಿಷ್ಯ ನುಡಿಯಲ್ಲ ಎಂದು ಹೇಳುವು ಮೂಲಕ ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಮೂಡಿಸಿದ್ದಾರೆ.

ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವೀಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. 23ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.