ಚಿಕ್ಕೋಡಿ (ಬೆಳಗಾವಿ): ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿರಲಿಲ್ಲ. ಯಡಿಯೂರಪ್ಪ ಸಂಪುಟದಲ್ಲಿ 6 ತಿಂಗಳು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸರಿಯಾಗಿ ನಿಭಾಯಿಸಿದ್ದೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಕ್ಯಾತೆ ತೆಗೆಯದೇ ಕೊಟ್ಟ ಹೆಚ್ಚುವರಿ ಖಾತೆಯನ್ನೂ ತೆಪ್ಪಗೇ ಒಪ್ಪಿಕೊಂಡ ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
ಬೊಮ್ಮಾಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜೊತೆಗೆ ಅರಣ್ಯ ಇಲಾಖೆ ಜವಾಬ್ದಾರಿ ಪಡೆದಿರುವ ಉಮೇಶ್ ಕತ್ತಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಖಾತೆ ಹಂಚಿಕೆಯಿಂದ ಸಂತೃಪ್ತನಾಗಿದ್ದೇನೆ ಎಂದಿದ್ದಾರೆ..
ಉಮೇಶ್ ಕತ್ತಿ
ಅರಣ್ಯ ಇಲಾಖೆಯ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಖಾತೆ ಹಂಚಿಕೆಯಿಂದ ನಾನು ಸಂಪೂರ್ಣ ಸಂತೃಪ್ತನಿದ್ದೇನೆ. ಅದನ್ನು ಕೂಡ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಅರಣ್ಯ ಇಲಾಖೆ ಸಚಿವ ಕತ್ತಿ ಹೇಳಿದ್ದಾರೆ.
ಓದಿ:ಸಿಎಂ ನಾನು ಕೇಳಿದ ಖಾತೆಯನ್ನೇ ನೀಡಿದ್ದಾರೆ: ಸಚಿವ ಶಿವರಾಮ್ ಹೆಬ್ಬಾರ್