ಚಿಕ್ಕೋಡಿ (ಬೆಳಗಾವಿ):ರಮೇಶ್ ಜಾರಕಿಹೊಳಿ ಅವರಿಗೆ ನನ್ನ ಮನೆಯನ್ನು ಅರ್ಧ ಖಾಲಿ ಮಾಡಿ ಕೊಡುತ್ತೇನೆ. ಬರುವುದಾದರೆ ಇಲ್ಲೇ ಬಂದು ಚುನಾವಣೆ ಮಾಡಲಿ ಎಂದು ಲಕ್ಷ್ಮಣ್ ಸವದಿ ಗೋಕಾಕ್ ಶಾಸಕರಿಗೆ ಸವಾಲು ಹಾಕಿದರು.
ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ ಜಾರಕಿಹೊಳಿ ಅವರು ಅಥಣಿಗೆ ಬರುವುದಾದರೆ ನಾನು ನನ್ನ ಮನೆಯನ್ನು ಅರ್ಧ ಬಿಡುತ್ತೇನೆ ಅಥವಾ ಅಥಣಿಯಲ್ಲಿ ಮತ್ತೊಂದು ಮನೆ ಮಾಡಿ ಕೊಡುತ್ತೇನೆ. ಸೋಲು ಗೆಲುವು ನಾವು ನೀವು ಮಾಡುವುದಲ್ಲ. ಇದನ್ನು ಅಥಣಿ ಜನತೆ ಮಾಡುತ್ತಾರೆ. ಇಂತಹ ಮಹಾನುಭಾವನಿಂದ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೊರಗೆ ಬಂದಿದ್ದೇನೆ ಎಂದು ರಮೇಶ್ ಜಾರಕಿಹೊಳಿಗೆ ಸವದಿ ವಿರುದ್ಧ ಗಂಭೀರ ಆರೋಪ ಮಾಡಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಆಕ್ರೋಶ:ರಮೇಶ್ ಜಾರಕಿಹೊಳಿ ನನಗೆ ಪೀಡೆ ಎಂದು ಹೇಳುತ್ತಾರೆ, ಆದರೆ, ಅವರು ಸ್ವಲ್ಪ ನೆನಪು ಮಾಡಿಕೊಳ್ಳಬೇಕು, ನಮ್ಮ ಕಡೆ ಹಳ್ಳಿಯಲ್ಲಿ ಮಾತನಾಡುತ್ತಾರೆ ಬಳುವ ಹೊಕ್ಕ ಮನೆ ಅಳಗಾಲು ಎಂದು ಹೇಳುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಕಾಲು ಇಟ್ಟಲ್ಲಿ ಪಕ್ಷಗಳು ಅಳಗಾಲು ಆಗುತ್ತಿವೆ. ಹಿಂದೆ ಕಾಂಗ್ರೆಸ್ ಪಕ್ಷ, ಇನ್ನೂ ಮುಂದೆ ಬಿಜೆಪಿ ಪಕ್ಷ ಅಳಗಾಲು ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಟೇಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಹನಿ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ, ಸಿಎಂ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕರಿಂದಲೇ ಆರೋಪ: ಗೌರವ್ ವಲ್ಲಭ್