ಕರ್ನಾಟಕ

karnataka

ETV Bharat / state

ನನಗೆ ಕೊರೊನಾ ಲಕ್ಷಣಗಳಿವೆ, ಪರೀಕ್ಷೆಗೆ ಒಳಪಡಿಸಿ: ಸೆಲ್ಫ್​ ಕ್ವಾರಂಟೈನ್​ ಆದ ಯೋಧನಿಂದ ಸಿಎಂಗೆ ಮನವಿ - request from a soldier

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಸಿಆರ್ ಪಿ ಎಫ್ ಯೋಧ ಗೋವಿಂದ್ ರೆಡ್ಡಿ ಕೊರೊನಾ ಸೋಂಕಿನ ಅನುಮಾನದ ಹಿನ್ನೆಲೆ ವಿಡಿಯೋ ಮಾಡಿದ್ದು ಪರೀಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿದ್ದಾರೆ.

soldier
ಯೋಧ

By

Published : Mar 27, 2020, 11:36 AM IST

ಬೆಳಗಾವಿ:ತಮಗೆ ಕೊರೊನಾ ಸೋಂಕಿನ ಲಕ್ಷಣಗಳಿದ್ದು ಪರೀಕ್ಷೆಗೆ ಒಳಪಡಿಸುವಂತೆ ಬೆಳಗಾವಿ ಮೂಲದ ಯೋಧ ವಿಡಿಯೋ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದಾನೆ.

ಸಿಆರ್ ಪಿ ಎಫ್ ಯೋಧ ಗೋವಿಂದ್ ರೆಡ್ಡಿ

ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಸಿಆರ್ ಪಿ ಎಫ್ ಯೋಧ ಗೋವಿಂದ್ ರೆಡ್ಡಿ ಮಾರ್ಚ್ 17 ರಂದು ಹೈದರಾಬಾದ್‌ನಿಂದ ಸ್ವ ಗ್ರಾಮಕ್ಕೆ ಬಂದಿದ್ದು, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ ಇವರು ಕೊಠಡಿಯೊಂದರಲ್ಲಿ ಇದೀಗ ಸೆಲ್ಫ್​ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಇದಕ್ಕೂ ಮುನ್ನ ಯೋಧ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದು, ಆಗ ಕಿಮ್ಸ್ ವೈದ್ಯರು ನಿಮ್ಮಲ್ಲಿ ಕೊರೊನಾ ಗುಣಲಕ್ಷಣಗಳು ಇಲ್ಲ. ವಿದೇಶದಿಂದ ಬಂದವರಿಗೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರಂತೆ. ಆದರೆ ಈಗ ನನ್ನ ವೃದ್ಧ ತಾಯಿಗೂ ಕೆಮ್ಮು, ನೆಗಡಿ ಲಕ್ಷ್ಮಣ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೊರೊನಾ ಪರೀಕ್ಷೆಗೆ ಒಳಡಿಸುವಂತೆ ಒತ್ತಾಯ ಮಾಡಿದ್ದಾರೆ.

ABOUT THE AUTHOR

...view details