ಚಿಕ್ಕೋಡಿ: ಬಿಜೆಪಿಯಲ್ಲಿ ಇರಬೇಕೋ ಬೇಡವೊ ಯೋಚನೆಯಲ್ಲಿರುವೆ ಎಂದು ದಿ.ಉಮೇಶ ಕತ್ತಿ ಪುತ್ರ ನಿಖಿಲ ಕತ್ತಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯನ್ನು ಕಳೆದುಕೊಂಡು ಕತ್ತಿ ಕುಟುಂಬ ದುಃಖದಲ್ಲಿದೆ. ಆ ನೋವಿನಿಂದ ಇನ್ನೂ ಹೊರಗೆ ಬಂದಿಲ್ಲ. ಕುಟುಂಬದಲ್ಲಿ ಯಾರೂ ಸ್ಪರ್ಧೆ ಮಾಡಬೇಕೆಂಬ ಚರ್ಚೆಯೂ ಮಾಡಿಲ್ಲ.ಸದ್ಯ ಬಿಜೆಪಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಇರಬೇಕೋ ಬೇಡವೊ ಯೋಚನೆಯಲ್ಲಿರುವೆ ? ಉಮೇಶ ಕತ್ತಿ ಪುತ್ರ ನಿಖಿಲ್ ಅಚ್ಚರಿ ಹೇಳಿಕೆ - ಕತ್ತಿ ಕುಟುಂಬ
ಹುಕ್ಕೇರಿ ಕ್ಷೇತ್ರದಿಂದ ಚುನಾವಣೆಗೆ ಯಾರೂ ಸ್ಪರ್ಧಿಸಬೇಕು ಎನ್ನುವ ಚರ್ಚೆ ನಮ್ಮ ಕುಟುಂಬದಲ್ಲಿ ಇನ್ನೂ ನಡೆದಿಲ್ಲ.ಬಿಜೆಪಿ ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ನಿಖಿಲ್ ಕತ್ತಿ ಅಭಿಪ್ರಾಯ.
ನಿಖಿಲ ಕತ್ತಿ
ಹುಕ್ಕೇರಿ ಕ್ಷೇತ್ರದಿಂದ ಚುನಾವಣೆಗೆ ಯಾರೂ ಸ್ಪರ್ಧಿಸಬೇಕು ಎನ್ನುವ ಚರ್ಚೆ ನಮ್ಮ ಕುಟುಂಬದಲ್ಲಿ ಇನ್ನೂ ನಡೆದಿಲ್ಲ. ಕ್ಷೇತ್ರದ ಜನರೆಲ್ಲ ಕತ್ತಿ ಕುಟುಂಬದ ಅಭ್ಯರ್ಥಿ ಚುನಾವಣೆಗೆ ನಿಲ್ಲಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದಿಂದ ಚುನಾವಣೆ ಕುರಿತು ಯಾವುದೇ ಸೂಚನೆ ಬಂದಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಿಂದೂ ಕಾರ್ಯಕರ್ತರ ಕೊಲೆ ಮಾಡಿಸಿದ್ದು ಬಿಜೆಪಿ: ಶಿವರಾಜ ತಂಗಡಗಿ ನೇರ ಆರೋಪ
Last Updated : Dec 3, 2022, 9:03 PM IST