ಬೆಳಗಾವಿ:ನಾವಂತೂ ಕಳೆದ ಎರಡು ತಿಂಗಳಿಂದ ವಿಧಾನ ಸಭೆ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ನಾನು ಮಂತ್ರಿಯಾಗುವುದರ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಮಂತ್ರಿ ಮಾಡು ವಿಚಾರವೆಲ್ಲವೂ ಸಿಎಂ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ. ಅವರು ಏನು ಆದೇಶ ಕೊಡುತ್ತಾರೆ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ರಮೇಶ್ ಜಾರಕಿಹೊಳಿ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಬಿಜೆಪಿಯಲ್ಲೇ ಉಳಿಯುತ್ತೇನೆ ಎಂದು ಬಹಳ ಸ್ಪಷ್ಟವಾಗಿ ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ 2023ರ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟು ವರಿಷ್ಠರು ಹೇಳಿದ ಕಡೆ ಹೋಗಿ ಕೆಲಸ ಮಾಡಿ ಬಿಜೆಪಿ ಪಕ್ಷ ಪೂರ್ಣ ಬಹುಮತ ತರಲು ಪ್ರಯತ್ನ ಮಾಡುತ್ತೇನೆ ಎಂದರು.
ಸಕ್ಕರೆ ಕಾರ್ಖಾನೆ ಅವ್ಯವಹಾರ ಬಯಲು: ರಮೇಶ್ ಜಾರಕಿಹೊಳಿ ಮಂತ್ರಿಯಾದ್ರೇ ಸಕ್ಕರೆ ಕಾರ್ಖಾನೆಯಲ್ಲಿ ಮಾಡಿದ ಅವ್ಯವಹಾರ ಬಯಲು ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿದರು. ಅವರಿಗೆ ಮೋಸ್ಟ್ ವೆಲ್ ಕಮ್, ಇದನ್ನ ಸ್ವಾಗತ ಮಾಡುತ್ತೇನೆ ಎಂದು ವ್ಯಂಗ್ಯ ಮಾಡಿದರು. ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು, ವಿರೋಧ ಮಾಡೋರೆ ವಿರೋಧಿ ಮಾಡಲಿ ನಾವೇನೂ ಮಾಡಬೇಕು ಮಾಡುತ್ತೇವೆ ಎಂದು ಹೇಳಿದರು. ಕಾನೂನು ಬದ್ಧವಾಗಿ ಸಕ್ಕರೆ ಕಾರ್ಖಾನೆ ನನ್ನ ಮಗ ನಡೆಸುತ್ತಾನೆ. ಕಳೆದ ಆರು ವರ್ಷದಿಂದ ಕಾರ್ಖಾನೆಗೆ ನಾನು ಕಾಲಿಟ್ಟಿಲ್ಲ ಎಂದರು. ಆ ಫ್ಯಾಕ್ಟರಿ ವ್ಯವಹಾರ ನನ್ನ ಮಗ ನೋಡುತ್ತಾನೆ. ಅವನು ಅದಕ್ಕೆ ಉತ್ತರ ಕೊಡ್ತಾನೆ ಅಂತಾ ಡಿಕೆಶಿಗೆ ತಿರುಗೇಟು ನೀಡಿದರು.
ಬಿಕೆ ಹರಿಪ್ರಸಾದ್ 17ಜನ ಶಾಸಕರನ್ನ ವೆಷ್ಯಯರಿಗೆ ಹೋಲಿಸಿದ ವಿಚಾರ:ಬಿಕೆ ಹರಿಪ್ರಸಾದ್ ಅಂದಾಜು ತಪ್ಪು ಮಾತನಾಡಿರಬೇಕು ಆ ರೀತಿ ಮಾತಾಡುವ ಮನುಷ್ಯ ಅಲ್ಲಾ ಎನೋ ತಪ್ಪಿ ಮಾತಾಡಿರಬೇಕು ಎಂದು ಆ ಹೇಳಿಕೆಯನ್ನ ಸರ್ಮಥಿಸಿದಂತೆ ಉತ್ತರಿಸಿದರು. ನಾನು ಪೂರ್ಣ ಪ್ರಮಾಣದಲ್ಲಿ ನೋಡಿಲ್ಲ ನಮ್ಮ ಮಿತ್ರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.
17 ಶಾಸಕರ ಸಿಡಿ ಬಿಡುಗಡೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು 17 ಜನ ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆ ವಿಚಾರವಾಗಿ ಮಾತನಾಡಿ ಬಿಡಿ, ಸಿಡಿಗಳನ್ನ ಇಟ್ಟುಕೊಂಡು ಕುರಬಾರದು ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಿ ಇಂತಹ ನೂರು ಸಿಡಿ ಬರಲಿ ಎಲ್ಲ ಶಾಸಕರು ಫೈಟ್ ಮಾಡಲು ರೆಡಿ ಇದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಜನರಿಗೆ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಉತ್ತರ ಕೊಡ್ತಾರೆ ಎಂದು ಗುಡುಗಿದರು.