ಅಥಣಿ: ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ, ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ನಡೆದಿದೆ.
ಆಕಸ್ಮಿಕವಾಗಿ ಗುಡಿಸಲಿಗೆ ಬಿತ್ತು ಬೆಂಕಿ: ಸಂಕಷ್ಟದಲ್ಲಿ ರೈತ ಕುಟುಂಬ - ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ
ಬೈರಪ್ಪ ಸಾಬು ಥೈಕಾರ ಎಂಬ ರೈತನ ಗುಡಿಸಲಿಗೆ ಮಧ್ಯಾಹ್ನ ಉರಿಬಿಸಿಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿ ಇದ್ದ ಹತ್ತಕ್ಕೂ ಹೆಚ್ಚು ಕ್ವಿಂಟಲ್ ದವಸ ಧಾನ್ಯಗಳು, ಬಟ್ಟೆ, ಪಾತ್ರೆ, ಬಂಗಾರ, ಬೆಳ್ಳಿ ಬೆಂಕಿಯಲ್ಲಿ ಸುಟ್ಟು ಹೋಗಿದೆ.

ಬೈರಪ್ಪ ಸಾಬು ಥೈಕಾರ ಎಂಬ ರೈತನ ಗುಡಿಸಲಿಗೆ ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಹತ್ತಕ್ಕೂ ಹೆಚ್ಚು ಕ್ವಿಂಟಲ್ ದವಸ ಧಾನ್ಯಗಳು, ಬಟ್ಟೆ, ಪಾತ್ರೆ, ಬಂಗಾರ, ಬೆಳ್ಳಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಅಥಣಿಯಿಂದ ತೇಲಸಂಗ ಸುಮಾರು 35 ಕಿ.ಮೀ ದೂರ ಇರುವುದರಿಂದ ಅಗ್ನಿ ಶಾಮಕ ದಳ ಬರುವಷ್ಟರಲ್ಲಿ ಗುಡಿಸಲು ಸಂಪೂರ್ಣ ಹಾನಿಯಾಗಿದೆ. ತೇಲಸಂಗ್ ಹೋಬಳಿಯಲ್ಲಿ ಅಗ್ನಿ ಶಾಮಕ ಕಚೇರಿ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.