ಬೆಳಗಾವಿ: ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ಕುಡಿದ ನಶೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿಯನ್ನೇ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ: ಊಟ ಮಾಡಿ ನಿದ್ರಿಸುತ್ತಿದ್ದ ಪತ್ನಿ ಕೊಲೆಗೈದ ಪಾಪಿ ಪತಿ - mudalagi police station
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.
![ಬೆಳಗಾವಿ: ಊಟ ಮಾಡಿ ನಿದ್ರಿಸುತ್ತಿದ್ದ ಪತ್ನಿ ಕೊಲೆಗೈದ ಪಾಪಿ ಪತಿ ಮೂಡಲಗಿ ಪೊಲೀಸರು](https://etvbharatimages.akamaized.net/etvbharat/prod-images/768-512-16758028-thumbnail-3x2-sanju.jpg)
ಮೂಡಲಗಿ ಪೊಲೀಸರು
ಗುರ್ಲಾಪೂರ ಗ್ರಾಮದ ಯಲ್ಲವ್ವ ಹಾರೂಗೇರಿ (55) ಮೃತರು. ಪಾಂಡುರಂಗ ಹಾರೂಗೇರಿ ಕೊಲೆ ಮಾಡಿದ ವ್ಯಕ್ತಿ. ಮಹಿಳೆ ಊಟ ಮಾಡಿ ಮಲಗಿದ್ದಾಗ ಕೊಲೆಗಡುಕ ಮಚ್ಚಿನಿಂದ ಕೊಚ್ಚಿ, ಪರಾರಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ಬಂದ್ರು.. ವೃದ್ಧ ದಂಪತಿ ಕಟ್ಟಾಕಿ ಚಿನ್ನಾಭರಣ ಲೂಟಿ