ಬೆಳಗಾವಿ: ಮಹಿಳೆಯೊಬ್ಬಳಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮನೆ ವ್ಯವಹಾರ ಸಾವಿನಲ್ಲಿ ಅಂತ್ಯ: ಪತಿಯಿಂದಲೇ ಪತ್ನಿ ಹತ್ಯೆ - ದೊಣ್ಣೆಯಿಂದ ಹೊಡೆದು ಕೊಲೆ
ಕೊಲೆಯಾದ ಮಹಿಳೆ ಗ್ರಾಮದಲ್ಲಿ ಹೋಟೆಲ್ ಮತ್ತು ಮನೆಯ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಳು ಎನ್ನಲಾಗಿದೆ. ಇದನ್ನು ಸಹಿಸದ ಆಕೆಯ ಪತಿ ಕುಪಿತಗೊಂಡು ಕೊಲೆ ಮಾಡಿದ್ದಾನೆ.
ಪತ್ನಿ ಹತ್ಯೆ
ನೀಲವ್ವ ಲಕ್ಷ್ಮಣ ಮದ್ರಾಸಿ (65) ಕೊಲೆಯಾದ ಮಹಿಳೆ. ಈಕೆ ತನ್ನ ಗ್ರಾಮದಲ್ಲಿ ಹೋಟೆಲ್ ಮತ್ತು ಮನೆಯ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಳು ಎನ್ನಲಾಗಿದೆ. ಇದನ್ನು ಸಹಿಸದ ಆಕೆಯ ಪತಿ ಕುಪಿತಗೊಂಡು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಗೋಕಾಕದ ಪ್ರಭಾರ ಡಿವೈಎಸ್‌ಪಿ ಮನೋಜ ಕುಮಾರ ನಾಯ್ಕ, ಸಿಪಿಐ ವೆಂಕಟೇಶ ಮುರನಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.