ಬೆಳಗಾವಿ :ಇಬ್ಬರು ಮಕ್ಕಳ ಜೊತೆಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಮೃತಳ ಪತಿ ಮನೀಷ್ ಕೇಶ್ವಾನಿಯನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಕೃಷಾ ಸಂಬಂಧಿಕರ ದೂರಿನ ಮೇರಗೆ ಮನೀಷ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮನೀಷ್ ಬಂಧನಕ್ಕೆ ಕೃಷಾ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಮನೀಷ್ ಬಂಧಿಸುವವರೆಗೆ ಶವಗಳನ್ನು ಪಡೆಯುವುದಿಲ್ಲ ಎಂದು ಮೃತ ಮಹಿಳೆಯ ಪೋಷಕರು ಪಟ್ಟು ಹಿಡಿದಿದ್ದರು.
ಮತ್ತೊಂದೆಡೆ ಹೆಂಡತಿ-ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತಿ ಮನೀಷ್ ತಲೆಮರೆಸಿಕೊಂಡಿದ್ದ. ಗೋವಾದ ಸಂಬಂಧಿ ಮನೆಯಲ್ಲಿ ಈತ ತಂಗಿದ್ದ. ಈ ಮಾಹಿತಿ ಪಡೆದ ಕ್ಯಾಂಪ್ ಠಾಣೆ ಪೊಲೀಸರು ಗೋವಾಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಆನ್‌ಲೈನ್ ಗೇಮ್ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ : ತಿದ್ದುಪಡಿ ಕಾಯ್ದೆ ರದ್ದು
ಫೆ.11ರಂದು ಕೃಷಾ ತನ್ನ ಇಬ್ಬರು ಮಕ್ಕಳಾದ ವೀರೇನ್, ಭಾವೀರ್ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿಯ ಹಿಂಡಲಗಾ ಕೆರೆಗೆ ಮಕ್ಕಳ ಜೊತೆಗೆ ಹಾರಿ ಕೃಷಾ ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ಮಹಿಳೆಯ ಪೋಷಕರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.