ಕರ್ನಾಟಕ

karnataka

ETV Bharat / state

ನದಿ ತೀರದಲ್ಲಿ ತಲೆ ಎತ್ತಿವೆ ನೂರಾರು‌ ಬಾವಿಗಳು... ಕೃಷ್ಣೆಯ ಒಡಲಲ್ಲಿ ಏಕೀ ಗುಂಡಿಗಳು? - kannadanews

ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಬೇಸಿಗೆಯಲ್ಲಿ ಬತ್ತಿದ್ದು, ಜನ ಅದರಲ್ಲಿಯೇ ಬಾವಿ ತೋಡಿ ನೀರು ಪಡೆಯಲು ಮುಂದಾಗಿದ್ದಾರೆ.

ನದಿ ತೀರದಲ್ಲಿ ತಲೆ ಎತ್ತಿವೆ ನೂರಾರು‌ ಬಾವಿಗಳು

By

Published : May 14, 2019, 10:14 PM IST

ಬೆಳಗಾವಿ :ನದಿಯಲ್ಲಿ ನೀರು ಬತ್ತಿರುವ ಕಾರಣ ನದಿ ಪಾತ್ರದ ಜನ ಜೆಸಿಬಿ ಬಳಸಿಕೊಂಡು ಹೆಜ್ಜೆ ಹೆಜ್ಜೆಗೂ ಅಳವಾದ ಬಾವಿ ತೋಡಿಕೊಂಡು ನೀರು ಪಡೆದುಕೊಳ್ಳುತ್ತಿದ್ದಾರೆ.

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜೀವ ನದಿ ಕೃಷ್ಣೆ ಒಡಲು ಕಳೆದ ಒಂದು ತಿಂಗಳಿನಿಂದ ಬರಿದಾಗಿದೆ ಹೀಗಾಗಿ ರೈತರು ನದಿ ಪಾತ್ರದಲ್ಲಿ ಬೆಳೆದಿರುವ ಬೆಳೆಗಳು ಉಳಿಸಿಕೊಳ್ಳಲು ಜೆಸಿಬಿ ಯಂತ್ರಗಳನ್ನು ಬಳಸಿ ಹತ್ತಾರು ಅಡಿ ಆಳದ ಗುಂಡಿಗಳನ್ನು ಅಲ್ಲಲ್ಲಿ ತೋಡಿ ಅದರಲ್ಲಿ ಸಂಗ್ರಹವಾದ ನೀರನ್ನು ಪಂಪ್ ಮಾಡಿ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯ ನೀರು ಬಿಡುಗಡೆ ಮಾಡುವುದು ರೂಢಿ. ಆದರೆ ಪ್ರಸಕ್ತ ವರ್ಷ ಮೇ ಎರಡನೇ ವಾರವಾದರೂ ಮಹಾರಾಷ್ಟ್ರದಿಂದ ಕೃಷ್ಣ ನದಿಗೆನೀರು ಬಿಡುಗಡೆಯಾಗಿಲ್ಲ ಹೀಗಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿವೆ ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಯ ಬೇಕಾದ ಬೆಳೆ ಬಿತ್ತನೆಗೂ ರೈತರು ಹಿಂದೇಟು ಹಾಕುತ್ತಿದ್ದಾರೆ.

ನದಿ ತೀರದಲ್ಲಿ ತಲೆ ಎತ್ತಿವೆ ನೂರಾರು‌ ಬಾವಿಗಳು

ಗಡಿಭಾಗದಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದರೂ ಜಿಲ್ಲಾ ಆಡಳಿತ ಮಾತ್ರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂಬುದು ನದಿ ತೀರದ ಜನರ ಆಕ್ರೋಶವಾಗಿದೆ.

ABOUT THE AUTHOR

...view details