ಕರ್ನಾಟಕ

karnataka

ETV Bharat / state

ಜಿಪಿಎಸ್ ಮೂಲಕ ಕಾರು ಕಳ್ಳತನ; ಹುಕ್ಕೇರಿ ಪೊಲೀಸರ ಬಲೆಗೆ ಬಿದ್ದ ಕಳ್ಳರ ಗ್ಯಾಂಗ್‌

ಜಿಪಿಎಸ್ ಮುಖಾಂತರ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕಳ್ಳರ​ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

Car thieves arrested
ಕಾರು ಕಳ್ಳರ ಬಂಧನ

By

Published : Jan 19, 2023, 8:13 AM IST

ಚಿಕ್ಕೋಡಿ (ಬೆಳಗಾವಿ) :ಜಿಪಿಎಸ್ ಮುಖಾಂತರ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರ ತಂಡದ ಸದಸ್ಯರು ಹುಕ್ಕೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರು ಬ್ರೋಕರ್ ಓರ್ವ ಮಾರಾಟವಾಗಿರುವ ಕಾರನ್ನು ಜಿಪಿಎಸ್ ಮುಖಾಂತರ ಟ್ರೇಸ್ ಮಾಡಿ ಮತ್ತದೇ ಕಾರನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಪ್ರಕರಣ ಇದಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಗ್ರಾಮದ ರವೀಂದ್ರ ದಾಮೋದರ್ ರಾಠೋಡ್, ಮಂಜುನಾಥ್ ಮದಕರಿ, ಶಿವಪ್ರಸಾದ್ ಕೆರಿ ಮತ್ತು ಸೋಮನಾಥ್ ಪಾಟೀಲ್ ಎಂಬ ಆರೋಪಿಗಳನ್ನು ಕಳ್ಳತನ ಹಾಗೂ ವಂಚನೆ ಪ್ರಕರಣದಲ್ಲಿ ಪೊಲಿಸರು ಅರೆಸ್ಟ್‌ ಮಾಡಿದ್ದಾರೆ.

ಘಟನೆಯ ವಿವರ:2022ರ ಜುಲೈ ತಿಂಗಳಲ್ಲಿ ಹುಕ್ಕೇರಿ ತಾಲ್ಲೂಕಿನ ಹಂಜ್ಯಾನಟ್ಟಿ ಗ್ರಾಮದಲ್ಲಿ ನಡೆದ ಕಾರು ಕಳ್ಳತನ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಳುವಾದ ಕಾರನ್ನು ವಶಪಡಿಸಿಕೊಂಡಿದ್ಧಾರೆ. ಪ್ರಕರಣದ ಪ್ರಮುಖ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನ ನಿವಾಸಿಯಾದ ರವಿಂದ್ರ ದಾಮೋದರ್ ರಾಠೋಡ್. ಈತ ಗಡಹಿಂಗ್ಲಜ್ ಎಂ.ಎಸ್.ಆರ್.ಟಿ.ಸಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದನು. ಕಾರಣಾಂತರಗಳಿಂದ ಕೆಲಸ ಕಳೆದುಕೊಂಡು ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ವ್ಯವಹಾರ ಮಾಡುತ್ತಿದ್ದನು.

ಹೀಗೆ ಬೇರೆಯವರ ಕಾರುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಪಡೆದುಕೊಂಡ ನಂತರ ಕಾರುಗಳ ನಂಬರ್​ ಬೋರ್ಡ್​ಗಳನ್ನು ಬದಲಾಯಿಸುತ್ತಿದ್ದ. ಇದರ ಜೊತೆಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ. ಹಣ ಪಡೆದುಕೊಂಡ ಮೇಲೆ ಆ ವಾಹನದಲ್ಲಿ ಅಳವಡಿಸಿದ್ದ ಜಿಪಿಎಸ್ ಮುಖಾಂತರ, ಆ ವಾಹನ ಎಲ್ಲಿದೆ ಎಂದು ಪತ್ತೆ ಮಾಡುತ್ತಿದ್ದ. ಕಾರು ಇರುವ ಸ್ಥಳ ಗೊತ್ತಾಗುತ್ತಿದಂತೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಗಡಹಿಂಗ್ಲಜ್ ತಾಲ್ಲೂಕಿನಲ್ಲಿರುವ ಪರಿಚಯಸ್ಥ ಮೂವರು ಸ್ನೇಹಿತರಿಗೆ ಹೇಳಿ ಅವರಿಂದ ಆ ವಾಹನವನ್ನು ಕಳ್ಳತನ ಮಾಡಿಸಿದ್ದನು.

ಅದೇ ವಾಹನವನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದ. ಈ ಪ್ರಕರಣ ಕೈಗೆತ್ತಿಕೊಂಡ ಹುಕ್ಕೇರಿ ಪೊಲೀಸರು ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್ ಕೊಲ್ಲಾಪುರ, ಪುಣೆ, ನಾಸಿಕ್, ಔರಂಗಾಬಾದ್ ಹಾಗೂ ಪಂಡರಾಪುರಗಳಲ್ಲಿ ಶೋಧ ಕಾರ್ಯಾಚರಣೆ ಮಾಡಿದ್ದರು. ಈ ವೇಳೆ ಕಳುವಾದ ಕಾರು ಹಾಗೂ ಆರೋಪಿತರು ಕೃತ್ಯಕ್ಕಾಗಿ ಉಪಯೋಗಿಸಿದ ಮೋಟರ್ ಸೈಕಲ್‌ ಜಪ್ತಿ ಮಾಡಿದ್ದರು.

ಇತ್ತೀಚಿನ ಘಟನೆಗಳು:ಯಕ್ಸಂಬಾ-ರಾಯಭಾಗ ರಸ್ತೆಯ ಮಧ್ಯೆ ಜ.6ರಂದು ಬೈಕ್​​ ಅಪಘಾತ ಸಂಭವಿಸಿತ್ತು. ಮಹಾರಾಷ್ಟ್ರದ ಉಸ್ಮಾನಾಬಾದ್​ ಮೂಲದ ದತ್ತಾ ಎಂಬುವರು ಬೈಕ್​​ನಲ್ಲಿ ತೆರಳುವಾಗ ರಸ್ತೆ ಬದಿ ವಿದ್ಯುತ್​​ ಕಂಬಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರ ರಕ್ಷಣೆಗೆ ಯಾರೂ ಮುಂದಾಗಿರಲಿಲ್ಲ. ಸದ್ಯ ಅದೇ ಮಾರ್ಗದಲ್ಲಿ ರಾಯಭಾಗಕ್ಕೆ ತೆರಳುತ್ತಿದ್ದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಅವರು ತಮ್ಮ ವಾಹನ ನಿಲ್ಲಿಸಿ ಗಾಯಾಳುವಿನ ನೆರವಿಗೆ ಮುಂದಾಗಿದ್ದರು. ತಮ್ಮ ಸರ್ಕಾರಿ ವಾಹನ ಚಾಲಕ ಹಾಗೂ ಇನ್ನೊಬ್ಬರ ನೆರವಿನಿಂದ ಗಾಯಾಳುವನ್ನು ಚಿಕ್ಕೋಡಿಯ ಸರ್ಕಾರಿ ಆಸ್ಪತೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ್ದರು.

ಇದನ್ನೂ ಓದಿ:ನೆಲಮಂಗಲ: ಮನೆಗಳ್ಳತನ ಯತ್ನ, ಸಿಕ್ಕಿಬಿದ್ದ ಮಹಿಳೆಗೆ ಧರ್ಮದೇಟು

ABOUT THE AUTHOR

...view details