ಚಿಕ್ಕೋಡಿ:ಹುಕ್ಕೇರಿ ಪಟ್ಟಣದಲ್ಲಿ ಮಳೆ ಅವಾಂತರ ಉಂಟು ಮಾಡಿದೆ. ಇಲ್ಲಿನ ಹಳ್ಳದ ಪಕ್ಕದಲ್ಲಿರುವ ಮನೆಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆದರೆ ಈವರೆಗೂ ಹಳ್ಳ ಮಾತ್ರ ದುರಸ್ತಿಯಾಗಿರಲಿಲ್ಲ.
ಸಚಿವ ಅಶೋಕ್ ಭೇಟಿ: ಎಚ್ಚೆತ್ತ ಹುಕ್ಕೇರಿ ಅಧಿಕಾರಿಗಳಿಂದ ಹಳ್ಳದ ಸ್ವಚ್ಛ ಕಾರ್ಯ - Hukkeri
ಹುಕ್ಕೇರಿ ಪಟ್ಟಣದಲ್ಲಿ ಮಳೆ ಅವಾಂತರದ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಸಚಿವ ಆರ್.ಅಶೋಕ ಭೇಟಿ ನೀಡುತ್ತಾರೆ ಎಂಬ ವಿಚಾರ ತಿಳಿದು ಎಚ್ಚೆತ್ತ ಅಧಿಕಾರಿಗಳು ಸ್ವಚ್ಚತೆಗೆ ಮುಂದಾದರು.
ಆರ್. ಅಶೋಕ್ ಭೇಟಿ
ಆದರೆ ನಿನ್ನೆ ಹುಕ್ಕೇರಿ ಪಟ್ಟಣಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ ನೀಡುತ್ತಾರೆ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಹಳ್ಳ ಸ್ವಚ್ಛತೆಗೆ ಮುಂದಾಗಿದ್ದಾರೆ.
ಪಟ್ಟಣಕ್ಕೆ ಭೇಟಿ ನೀಡಿದ ಕಂದಾಯ ಸಚಿವರು ಪ್ರವಾಹದ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇದ್ದರು.