ಕರ್ನಾಟಕ

karnataka

ETV Bharat / state

ವೀರಭದ್ರೇಶ್ವರ ಪ್ರಶಸ್ತಿಗೆ ಬಿಎಸ್‌ವೈ ಆಯ್ಕೆ: ಸಿಎಂ ಬೊಮ್ಮಾಯಿಂದ ಪ್ರಶಸ್ತಿ ಪ್ರದಾನ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವೀರಭದ್ರೇಶ್ವರ ಜಯಂತಿ ಆಯೋಜಿಸಲಾಗುತ್ತಿದೆ. ಸೆ. 14 ರಂದು ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿರುವ ವೀರಭದ್ರೇಶ್ವರ ಜಯಂತ್ಯುತ್ಸವದಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈಗೆ ಪ್ರಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ನೀಡಲಾಗುವುದು ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.

ಪ್ರಥಮ ವೀರಭದ್ರೇಶ್ವರ ಪ್ರಶಸ್ತಿಗೆ ಬಿಎಸ್‌ವೈ ಆಯ್ಕೆ
ಪ್ರಥಮ ವೀರಭದ್ರೇಶ್ವರ ಪ್ರಶಸ್ತಿಗೆ ಬಿಎಸ್‌ವೈ ಆಯ್ಕೆ

By

Published : Sep 11, 2021, 4:01 PM IST

ಬೆಳಗಾವಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಇದೇ ಮೊದಲ ಬಾರಿಗೆ ಆರಂಭಿಸಲಾಗಿರುವ ವೀರಭದ್ರೇಶ್ವರ ಪ್ರಶಸ್ತಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನೀಡಲಾಗುವುದು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.

ವೀರಭದ್ರೇಶ್ವರ ಪ್ರಶಸ್ತಿಗೆ ಬಿಎಸ್‌ವೈ ಆಯ್ಕೆ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಿದೆ. ಆದರೆ ಯಾರೂ ಸಹ ವೀರಭದ್ರೇಶ್ವರ ಜಯಂತಿ ಮಾಡ್ತಿರಲಿಲ್ಲ. ಎಲ್ಲ ಸಮುದಾಯದವರು ವೀರಭದ್ರೇಶ್ವರ ಜಯಂತಿ ಆಚರಿಸಬೇಕೆಂದಾಗ ಮುಂದೆ ಬಂದಿದ್ದು, ವೀರಶೈವ ಲಿಂಗಾಯತ ಸಂಘಟ‌ನಾ ವೇದಿಕೆ.

ಸೆಪ್ಟೆಂಬರ್​ 14ಕ್ಕೆ ಪ್ರಶಸ್ತಿ ಪ್ರದಾನ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವೀರಭದ್ರೇಶ್ವರ ಜಯಂತಿ ಆಯೋಜಿಸಲಾಗುತ್ತಿದೆ. ಸೆ. 14 ರಂದು ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿರುವ ವೀರಭದ್ರೇಶ್ವರ ಜಯಂತ್ಯುತ್ಸವದಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈಗೆ ಪ್ರಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ನೀಡಲಾಗುವುದು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ವೀರಭದ್ರೇಶ್ವರ ಜಯಂತಿಗೆ ಚಾಲನೆ ನೀಡಲಿದ್ದಾರೆ. ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಸ್ಥಾಪನೆ ಮಾಡಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪ್ರಸಕ್ತ ವರ್ಷದ ವೀರಭದ್ರೇಶ್ವರ ಪ್ರಶಸ್ತಿ ನೀಡಲಾಗುವುದು. ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮುದಾಯ ಒಂದುಗೂಡಿಸುವುದಷ್ಟೇ ಗೊತ್ತು: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಸಮುದಾಯ ಒಗ್ಗೂಡಿಸುವುದಷ್ಟೇ ಗೊತ್ತು. ಉಳಿದ ಬಗ್ಗೆ ನಂಗೆ ಗೊತ್ತಿಲ್ಲ. ಎಲ್ಲರೂ ಒಗ್ಗೂಡಿ ಸಮಾಜ ಕಟ್ಟೋದು, ಆ ನಿಟ್ಟಿನಲ್ಲಿ ಎಲ್ಲರೂ ಮುಂಚೂಣಿಯಲ್ಲಿ ನಿಲ್ತಾರೆಂಬ ಆಶಾಭಾವನೆ ಇದೆ. ನಾನು ಆಶಾವಾದಿ, ಸಮಾಜ ಕಟ್ಟುವ ಕೆಲಸದಲ್ಲಿ ಸದಾ ಎಲ್ಲರ ಜೊತೆಗಿರುತ್ತೇನೆ. ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಬಗ್ಗೆ ಚರ್ಚೆ ಮಾಡಲು ದೊಡ್ಡ ದೊಡ್ಡ ಜಗದ್ಗುರುಗಳು, ಸ್ವಾಮೀಜಿಗಳು ಇದ್ದಾರೆ ಎಂದರು.

ಮಹಾನಗರ ಪಾಲಿಕೆ ಮೇಯರ್ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಲು ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆ ಸಮುದಾಯ ಈ ಸಮುದಾಯ ಅನ್ನುವ ಬದಲು ಪಕ್ಷಭೇದ ಮರೆತು ಬೆಳಗಾವಿ ಅಭಿವೃದ್ಧಿ ಮಾಡಲಿ. ಪಕ್ಷಭೇದ ಜಾತಿಭೇದ ಮರೆತು ಬೆಳಗಾವಿ ಗಟ್ಟಿಗೊಳಿಸಲು ಪ್ರಯತ್ನಿಸಬೇಕಿದೆ.

ಸಮುದಾಯ ವಿಚಾರಕ್ಕೆ ಬಂದಾಗ ಯಾವ ಸಮುದಾಯಕ್ಕೆ ಏನ್ ಬೇಕು ಆ ರಾಜಕೀಯ ಪಕ್ಷಗಳು ನಿರ್ಧಾರ ಮಾಡುತ್ತವೆ. ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ನಮ್ಮ ಆಗ್ರಹ ಮೊದಲಿನಿಂದಲೂ ಇದೆ. ಆ ಬಗ್ಗೆ ಮತ್ತೆ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ : ಸಾರಿಗೆ ನೌಕರರಿಗೆ ಗುಡ್​ನ್ಯೂಸ್.. ನಾಳೆಯಿಂದ ಶುರುವಾಗಲಿದೆ ಕೆಎಸ್ಆರ್​ಟಿಸಿ ಕೋವಿಡ್ ಆಸ್ಪತ್ರೆ..

For All Latest Updates

TAGGED:

Bgm

ABOUT THE AUTHOR

...view details