ಚಿಕ್ಕೋಡಿ:ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗಾಗಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಮುಂದೆ ಬಂದಿದೆ.
ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿಯ ಹಿರೇಮಠ - chikkodi
ಕೊರೊನಾ ವೈರಸ್ ಈಗ ಎಲ್ಲೆಡೆ ಭೀತಿ ಹುಟ್ಟಿಸಿದೆ. ಇನ್ನು ಈ ಮಹಾಮಾರಿ ತಡೆಗೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇದರಿಂದ ಜನ ಮನೆಯಿಂದ ಹೊರ ಬರಲೂ ಆಗುತ್ತಿಲ್ಲ.
![ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿಯ ಹಿರೇಮಠ hukkerimatt](https://etvbharatimages.akamaized.net/etvbharat/prod-images/768-512-6565628-thumbnail-3x2-mng.jpg)
ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿ ಹಿರೇಮಠ
ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿ ಹಿರೇಮಠ
ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ, ತಲಾ 1 ಕೆಜಿ ಸಕ್ಕರೆ, ರವೆ, ಹಿಟ್ಟು, ಎಣ್ಣೆ, ಬಿಸ್ಕತ್ತು, ಬಟ್ಟೆ ಸೋಪ್, ಚಹಾ ಪುಡಿಯಂತಹ ದಿನಸಿ ವಸ್ತುಗಳನ್ನ ಪೊಲೀಸರ ಮೂಲಕ ಜನರಿಗೆ ವಿತರಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸ್ವಾಮೀಜಿ, ವೈದ್ಯರು, ಪೊಲೀಸರು, ಸ್ವಚ್ಛತಾ ಕೆಲಸ ಮಾಡುವ ಜನರೇ ನಮಗೆ ದೇವರುಗಳು. ಹಾಗಾಗಿ ಅವರ ಕೆಲಸಗಳನ್ನ ಮೆಚ್ಚಲೇಬೇಕು. ಮನೆಯಲ್ಲೇ ಇದ್ದು ಕೊರೊನಾ ವಿರುದ್ದ ಹೋರಾಡಬೇಕು ಎಂದು ಕರೆ ನೀಡಿದರು.