ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಹಾಗೂ ಹುಕ್ಕೇರಿ ಕ್ಷೇತ್ರದಲ್ಲಿ ಕಳ್ಳ ಭಟ್ಟಿ ದಂಧೆಕೋರರ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಳ್ಳ ಭಟ್ಟಿ ದಂಧೆಕೋರರ ಮೇಲೆ ದಾಳಿ: 300 ಲೀ. ಕಳ್ಳಭಟ್ಟಿ ವಶ - Hukkari Excise Police Attack
ಕಳ್ಳ ಭಟ್ಟಿ ದಂಧೆಕೋರರ ಮೇಲೆ ಹುಕ್ಕೇರಿ ಅಬಕಾರಿ ಪೊಲೀಸರು ದಾಳಿ ನಡೆಸಿ 300 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದಾರೆ.
ಕಳ್ಳ ಭಟ್ಟಿ ದಂಧೆಕೋರರ ಮೇಲೆ ಹುಕ್ಕೇರಿ ಅಬಕಾರಿ ಪೊಲೀಸರ ದಾಳಿ
ದಾಳಿ ವೇಳೆ 3 ಜನ ಆರೋಪಿಗಳು ಪರಾರಿಯಾಗಿದ್ದು, ಇಂದು ಒಂದೇ ದಿನದಲ್ಲಿ 300 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರತ್ಯೇಕ 13 ಪ್ರಕರಣಗಳಲ್ಲಿ 5 ಜನ ದಂಧೆಕೋರರನ್ನು ಬಂಧಿಸಿದ್ದು, 11 ವಾಹನಗಳು ಸೀಜ್ ಮಾಡಲಾಗಿದೆ. ಲಾಕ್ ಡೌನ್ ದಿನದಿಂದ ಇದುವರೆಗೆ 450 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗ್ತಿದೆ.
ಈ ಕುರಿತು ಹುಕ್ಕೇರಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.