ಕರ್ನಾಟಕ

karnataka

ETV Bharat / state

ವಕೀಲರಿಂದ ಸುವರ್ಣಸೌಧ ಮುತ್ತಿಗೆ ಯತ್ನ: ವಕೀಲರು-ಪೊಲೀಸರ ನಡುವೆ ವಾಗ್ವಾದ - kpcc president sk shivakumar

ವಕೀಲರ ಹಿತರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿ ಬೆಳಗಾವಿಯಲ್ಲಿ ವಕೀಲರು ಪ್ರತಿಭಟನಾ ರ್ಯಾಲಿ ನಡೆಸಿದರು.

huge-protest-rally-of-lawyers-in-belgaum
ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ: ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬೆಂಬಲಿಸುವಂತೆ ಒತ್ತಾಯ

By

Published : Dec 27, 2022, 5:47 PM IST

ಸಿದ್ದರಾಮಯ್ಯ ಕಾರಿಗೆ ವಕೀಲರಿಂದ ಮುತ್ತಿಗೆ: ಸರ್ಕಾರದ ವಿರುದ್ಧ ಪ್ರತಿಭಟನೆ ಬೆಂಬಲಿಸುವಂತೆ ಒತ್ತಾಯ

ಬೆಳಗಾವಿ: ವಕೀಲರ ಹಿತರಕ್ಷಣಾ ಕಾಯಿದೆ 2021 ರ ಜಾರಿಗಾಗಿ ಆಗ್ರಹಿಸಿ ಬೆಳಗಾವಿ ನಗರದಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಗರದಿಂದ ಸುವರ್ಣಸೌಧದವರೆಗೂ ಅವರು ಪಾದಯಾತ್ರೆ ಮೂಲಕ ಸಾಗಿದರು. ಸುವರ್ಣಸೌಧದಿಂದ ಬೆಳಗಾವಿ ನಗರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡುವ ಸಂದರ್ಭದಲ್ಲಿ ಅವರ ಕಾರಿಗೆ ಮುತ್ತಿಗೆ ಹಾಕಿ, ವಕೀಲರ ಪರವಾಗಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು.

ಇದೇ ವೇಳೆ ಬೆಳಗಾವಿ ನಗರದಿಂದ ಸುವರ್ಣಸೌಧದ ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರುವ ಸಂದರ್ಭದಲ್ಲಿ ಅವರ ಕಾರನ್ನೂ ಅಡ್ಡಗಟ್ಟಿ, ನೀವು ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿ ಎಂದು ಒತ್ತಾಯಿಸುತ್ತಿದ್ದಂತೆ ವಕೀಲರ ಮನವಿಗೆ ಸ್ಪಂದಿಸಿದ ಡಿಕೆಶಿ, ಪಾದಯಾತ್ರೆಯಲ್ಲಿ ಭಾಗವಹಿಸಿದರು.

ರ್ಯಾಲಿಯುದ್ದಕ್ಕೂ ವಕೀಲರು ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಾ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್​ ಹಾಕಿದರು. ಆದರೆ, ಈ ಬ್ಯಾರಿಕೇಡ್​ ಕಿತ್ತೆಸೆದಿದ್ದು, ವಕೀಲರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಸುವರ್ಣಸೌಧದೊಳ ಬಿಡದ ಕಾರಣ ಅರ್ಧ ಗಂಟೆಗೂ ಅಧಿಕ ಕಾಲ ವಕೀಲರು ಆವರಣದಲ್ಲೇ ಪ್ರತಿಭಟನೆ ನಡೆಸಿದರು. ಸಚಿವ ಮಾಧುಸ್ವಾಮಿ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ ವಕೀಲರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಮಾಧುಸ್ವಾಮಿ ಸ್ಥಳಕ್ಕೆ ಆಗಮಿಸದಿದ್ದಾಗ ರೊಚ್ಚಿಗೆದ್ದು ಸುವರ್ಣಸೌಧದ ಬೃಹತ್​ ಗೇಟ್​ ಏರಿ ಹೈಡ್ರಾಮ ಸೃಷ್ಟಿಸಿದರು.

ಇದನ್ನೂ ಓದಿ:ಸದನ ಎಷ್ಟು ದಿನ ನಡೆಯುತ್ತೆ ಅನ್ನೋ ಕಾಮನ್ ಸೆನ್ಸ್ ಇಲ್ಲವೇ: ಅಧಿಕಾರಿಗಳ ವಿರುದ್ಧ ಸಭಾಪತಿ ಗರಂ

ABOUT THE AUTHOR

...view details