ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹಕ್ಕೆ ಬೇಸತ್ತು ಗರ್ಭಿಣಿ ನೇಣಿಗೆ ಶರಣು - House wife suicide in Belagavi

ತಾಲೂಕಿನ ಶಾಹಾಪುರ ನಗರದ ಅಳವನ್ ಗಲ್ಲಿ ನಿವಾಸಿ ಮುಸ್ಕಾನ್ ಕಗ್ಜಿ (20) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಏಂಟು ತಿಂಗಳ ಹಿಂದೆ ರೋಹಿಂ ಕಗ್ಜಿ ಎಂಬಾತನೊಂದಿಗೆ ಮುಸ್ಕಾನ್ ಮನೆಯವರ ಸಮ್ಮುಖದಲ್ಲಿ ಸರಳವಾಗಿ‌ ವಿವಾಹವಾಗಿದ್ದರು.

committed suicide in belagavi
ಗೃಹಿಣಿ ಆತ್ಮಹತ್ಯೆ

By

Published : Sep 16, 2021, 3:54 AM IST

Updated : Sep 16, 2021, 6:06 AM IST

ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ನವವಿವಾಹಿತೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಾಹಾಪುರದಲ್ಲಿ ನಡೆದಿದೆ.

ತಾಲೂಕಿನ ಶಾಹಾಪುರ ನಗರದ ಅಳವನ್ ಗಲ್ಲಿ ನಿವಾಸಿ ಮುಸ್ಕಾನ್ ಕಗ್ಜಿ (20) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಏಂಟು ತಿಂಗಳ ಹಿಂದೆ ರೋಹಿಂ ಕಗ್ಜಿ ಎಂಬಾತನೊಂದಿಗೆ ಮುಸ್ಕಾನ್ ಮನೆಯವರ ಸಮ್ಮುಖದಲ್ಲಿ ಸರಳವಾಗಿ‌ ಮದುವೆ ಆಗಿ ಸುಖಸಂಸಾರ ನಡೆಸುತ್ತಿದ್ದರು.

ಆದ್ರೆ, ಕಳೆದ ಮೂರು ತಿಂಗಳ ಹಿಂದೆ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ ರೋಹಿಂ ಮುಸ್ಕಾನ್ ಜೊತೆಗೆ ಪ್ರತಿನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಆತನ ಕಿರುಕುಳ ತಾಳಲಾರದೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಆಕೆ ಗರ್ಭಣಿ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸ್ಥಳಕ್ಕೆ ಶಾಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿನಾಯಕ್ ಬಡಿಗೇರ್ ಸೇರಿದಂತೆ ಮತ್ತವರ ತಂಡ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ಪ್ರಕರಣದ ಕುರಿತಂತೆ ಮುಸ್ಕಾನ್ ಸಹೋದರ ಅಕಿಬ್ ಮಕಾಂದರ್ ಶಹಾಪುರ ಪೊಲೀಸ್ ಠಾಣೆಯಲ್ಲಿ ಪತಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾನೆ.

ಇದನ್ನು ಓದಿ:ಶಿವಮೊಗ್ಗ: ಮದುವೆಗೂ ಮುನ್ನವೇ ಗರ್ಭವತಿಯಾದ ಯುವತಿಯ ದಾರುಣ ಅಂತ್ಯ

Last Updated : Sep 16, 2021, 6:06 AM IST

ABOUT THE AUTHOR

...view details