ಕರ್ನಾಟಕ

karnataka

ETV Bharat / state

ಧಾರಾಕಾರ ಮಳೆ: ಮನೆಗೋಡೆ ಕುಸಿದು ತಾಯಿ ಮಗು ಸ್ಥಳದಲ್ಲೇ ಸಾವು - ಈಟಿವಿ ಭಾರತ ಕನ್ನಡ

ಧಾರಾಕಾರ ಸುರಿದ ಮಳೆಗೆ ಮನೆ ಗೋಡೆ ಕುಸಿದು ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಮಾಡಂಗೇರಿ ಗ್ರಾಮದಲ್ಲಿ ನಡೆದಿದೆ.

house-wall-collapsed-and-two-were-died-in-belagavi
ಧಾರಾಕಾರ ಮಳೆ : ಮನೆಗೋಡೆ ಕುಸಿದು ತಾಯಿ ಮಗು ಸ್ಥಳದಲ್ಲೇ ಸಾವು

By

Published : Oct 1, 2022, 9:25 PM IST

ಬೆಳಗಾವಿ : ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮಾಡಂಗೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಯಲ್ಲವ್ವ ಮಹಾದೇವ ಬಾಗಿಲದ (40), ಪ್ರಜ್ಬಲ್ ಮಹಾದೇವ ಬಾಗಿಲದ (5) ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಯರಗಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೂರು ದಿನಗಳಿಂದ ಯರಗಟ್ಟಿ ತಾಲೂಕಿನಾದ್ಯಂತ ನಿರಂತರ ಮಳೆ ಆಗುತ್ತಿದ್ದು,ಇದರಿಂದ ಶಿಥಿಲಾವಸ್ಥೆಯಲ್ಲಿದ್ದ ಮಾಡಂಗೇರಿ ಗ್ರಾಮದ ಮಹಾದೇವ ಲಕ್ಷ್ಮಪ್ಪ ಬಾಗಿಲದ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭ ಅಲ್ಲೇ ಇದ್ದ ತಾಯಿ ಮತ್ತು ಮಗು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದರು.

ಸ್ಥಳಕ್ಕೆ ಯರಗಟ್ಟಿ ತಹಶೀಲ್ದಾರ್ ಮಹಾಂತೇಶ, ಮುರಗೋಡ ಸಿಪಿಐ ಮೌನೇಶ್ವರ ಮಾಲಿ ಪಾಟೀಲ, ಪಿಎಸ್ಐ ಬಸನಗೌಡ ನಿರ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ :ಹಿಟ್​ ಸಿನಿಮಾ​ ಶೈಲಿಯಲ್ಲಿ ಸ್ನೇಹಿತನ ಮರ್ಡರ್​​​​.. ಮೊಬೈಲ್ ಟವರ್ ಲೊಕೇಶನ್ ನೀಡಿತು ಸುಳಿವು!

ABOUT THE AUTHOR

...view details