ಕರ್ನಾಟಕ

karnataka

ETV Bharat / state

ಭಜ್ಜಿ - ಚುರುಮರಿಗಿಲ್ಲ ಉಳ್ಳಾಗಡ್ಡಿ.. ಅದರ ಬದಲು ಕ್ಯಾಬೇಜ್​ ಪೀಸು ನೀಡುವ ಹೋಟೆಲ್ ಮಾಲೀಕರು.. - ಚಿಕ್ಕೋಡಿಯಲ್ಲಿ ಈರುಳ್ಳಿ ಸಮಸ್ಯೆ

ಈರುಳ್ಳಿ ಬೆಲೆ ನೂರರ ಗಡಿ ದಾಟಿ ಹೋಟೆಲ್​, ದಾಬಾ ಮಾಲೀಕರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಬರುವ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈರುಳ್ಳಿ ಸಮಸ್ಯೆ
union problem in chikkodi

By

Published : Dec 20, 2019, 11:21 PM IST

ಚಿಕ್ಕೋಡಿ:ಈರುಳ್ಳಿ ಬೆಲೆ ನೂರರ ಗಡಿ ದಾಟಿ ಹೋಟೆಲ್​,ದಾಬಾ ಮಾಲೀಕರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಬರುವ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡಕ್ಕಿ, ಭಜ್ಜಿಯೊಳಗೆ ಈರುಳ್ಳಿಹುಡುಕಿದ್ರೂ ಸಿಕ್ಕೋದಿಲ್ಲ..

ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿ ಹಳ್ಳಿಗಳ ಹೋಟೆಲ್​ಗಳಲ್ಲಿ ಭಜ್ಜಿ ಹಾಗೂ ಖಾರದ ಭಡಂಗ್ (ಚುರುಮರಿ) ಖಾದ್ಯ ಫೇಮಸ್. ಈ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೇಬೇಕು.ಆದರೆ, ಏಕಾಏಕಿ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಹೋಟೆಲ್​ಗಳಲ್ಲಿ ಭಜ್ಜಿ, ಚುರುಮರಿಗಳಲ್ಲಿ ಈರುಳ್ಳಿ ಬದಲಾಗಿ ಕ್ಯಾಬೇಜ್ ಪೀಸ್​ ಕೊಡುತ್ತಿದ್ದಾರೆ. ಇದು ಗ್ರಾಹಕರಿಗೆ ತೆಲೆನೋವಾಗಿದೆ. ಮೊದಲಿನಿಂದಲೂ ಭಜ್ಜಿ, ಭಡಂಗ ಜೊತೆ ಉಳ್ಳಾಗಡ್ಡಿ ತಿನ್ನುವಂತವರಿಗೆ ಈಗ ಸೌತೆಕಾಯಿ, ಕ್ಯಾಬೇಜ್ ತಿನ್ನಲ್ಲು ಆಗದೆ ಮಾಲೀಕರ ಜತೆ ವಾಗ್ವಾದಕ್ಕಿಳಿಯುತ್ತಿದ್ದಾರೆ.

ದರ ಹೆಚ್ಚಾಗಲು ಕಾರಣ :ಈರುಳ್ಳಿ ಬೆಳೆಯನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣ ಭೂಮಿಯಲ್ಲಿ ಮತ್ತು ಕಬ್ಬಿನ ಸಾಲಿನಲ್ಲಿ 2ನೇ ವಾಣಿಜ್ಯ ಬೆಳೆಯಾಗಿ ಹೆಚ್ಚಾಗಿ ಬೆಳೆಯುವುದು ಸಾಮಾನ್ಯ. ಆದರೆ, ಈ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿರೋದರಿಂದ ಹಾಗೂ ಅತಿ ಮಳೆಯಿಂದಾಗಿ ನದಿಗೆ ಪ್ರವಾಹದಿಂದ ಲಕ್ಷಾಂತರ ಎಕರೆ ಈರುಳ್ಳಿ ನೀರಿನಿಂದ ಜಲಾವೃತಗೊಂಡಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಈರುಳ್ಳಿ ಬೆಲೆ ಅತಿ ಏರಿಕೆಯಾಗಿದೆ. ಆದರೆ, ಈ ಬಾರಿ ಉತ್ತರ ಕರ್ನಾಟಕದಲ್ಲಿ ಬೆಳೆದ ಈರುಳ್ಳಿ ಬೆಲೆ ಹಾಳಾಗಿದ್ದರಿಂದ ಈ ಭಾಗದ ಯಾವ ರೈತನಿಗೂ ಕೂಡಾ ಈರುಳ್ಳಿ ಬೆಳೆ ಕೈಗೆ ಬಂದಿಲ್ಲ.ಪ್ರತಿ ವರ್ಷ ನೂರಾರು ಕ್ವಿಂಟಲ್​ಗಳಷ್ಟು ಬೆಳೆಯುತಿದ್ದ ರೈತನಿಗೆ ಈ ಬಾರಿ ಈರುಳ್ಳಿ ಬೆಳೆ ಹಾಳಾಗಿ ಕಂಗಾಲಾಗುವಂತಾಗಿದೆ.

ABOUT THE AUTHOR

...view details