ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿ ಹೋಟೆಲ್ ಉದ್ಯಮ: ಶೇ. 50ರಷ್ಟು ಗ್ರಾಹಕರಿಗಾದರೂ ಸರ್ಕಾರ ಅವಕಾಶ ಕೊಡಲಿ! - ಹೋಟೆಲ್ ಉದ್ಯಮ ಲೇಟೆಸ್ಟ್ ನ್ಯೂಸ್

ಕೋವಿಡ್​ ಮಾರ್ಗಸೂಚಿಯಲ್ಲಿ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಆದ್ರೆ ಇದು ಹೋಟೆಲ್​ ಉದ್ಯಮವನ್ನು ಮತ್ತೆ ಸಂಕಷ್ಟಕ್ಕೆ ದೂಡುತ್ತಿದೆ. ಶೇ. 50ರಷ್ಟು ಗ್ರಾಹಕರಿಗಾದರೂ ಸೇವೆ ನೀಡಲು ಅವಕಾಶ ಕಲ್ಪಿಸಲಿ ಎಂದು‌ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.

hotel business facing difficulties from new covid rules
ಸಂಕಷ್ಟದಲ್ಲಿದೆ ಹೋಟೆಲ್ ಉದ್ಯಮ - ಶೇಕಡ 50ರಷ್ಟು ಗ್ರಾಹಕರಿಗಾದರೂ ಸರ್ಕಾರ ಅವಕಾಶ ಕೊಡಲಿ!

By

Published : Apr 22, 2021, 1:35 PM IST

ಬೆಳಗಾವಿ: ಮಹಾಮಾರಿ ಕೋವಿಡ್​​​ ಎರಡನೇ ಅಲೆ ಹರಡದಂತೆ ಟಫ್ ರೂಲ್ಸ್ ಜಾರಿ ಹಿನ್ನೆಲೆ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಳಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

ಸದಾ ಗ್ರಾಹಕರಿಂದ ತುಂಬಿತುಳುಕುತ್ತಿದ್ದ ನಗರದಲ್ಲಿರುವ ಬಹುತೇಕ ಹೋಟೆಲ್​​ಗಳು ಇಂದು ಖಾಲಿ ಖಾಲಿ ಇವೆ. ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆಗಷ್ಟೇ ಅವಕಾಶ ಇರುವುದರಿಂದ ಹೆಚ್ಚಿನ ಗ್ರಾಹಕರು ಹೋಟೆಲ್​ಗಳಿಗೆ ಬರುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದು, ಹೋಟೆಲ್ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

ಸಂಕಷ್ಟದಲ್ಲಿದೆ ಹೋಟೆಲ್ ಉದ್ಯಮ!

ಈಟಿವಿ ಭಾರತದೊಂದಿಗೆ ಮಾತನಾಡಿದ ಪಂಚವಟಿ ಹೋಟೆಲ್ ಮಾಲೀಕ ರವಿರಾಜ್, ನಮ್ಮ ಹೋಟೆಲ್‌ನಲ್ಲಿ 120 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೊದಲೇ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಪಾರ್ಸಲ್ ಸೇವೆ ಮಾತ್ರ ಇರೋದರಿಂದ ಗ್ರಾಹಕರೂ ಕೂಡ ಬರ್ತಿಲ್ಲ. ಹೋಟೆಲ್‌ಗಳಲ್ಲಿ ಶೇ. 50ರಷ್ಟು ಗ್ರಾಹಕರಿಗಾದರೂ ಸೇವೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದರು.

ಇದನ್ನೂ ಓದಿ:ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ: ಡಾ.ಕೆ.ಸುಧಾಕರ್

ದೂರದ ಊರಿನಿಂದ ಬರುವ ಪ್ರಯಾಣಿಕರು ಪಾರ್ಸಲ್ ತಗೆದುಕೊಂಡು ರಸ್ತೆ ಮೇಲೆ ನಿಂತು ತಿನ್ನೋ ಪರಿಸ್ಥಿತಿ ಬಂದಿದೆ. ಆದ್ರೆ, ಸರ್ಕಾರ ಹೊರಡಿಸಿದ ಕೋವಿಡ್ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಲು ಸಿದ್ಧರಿದ್ದೇವೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಶೇ. 50ರಷ್ಟು ಗ್ರಾಹಕರಿಗಾದರೂ ಸೇವೆ ನೀಡಲು ಅವಕಾಶ ಕಲ್ಪಿಸಲಿ ಎಂದು‌ ಒತ್ತಾಯ ಮಾಡಿದರು.

ABOUT THE AUTHOR

...view details