ಬೆಳಗಾವಿ:ಬೈಕಿಗೆ ನಾಯಿ ಅಡ್ಡಬಂದಿದ್ದ ನಾಯಿಯನ್ನು ಉಳಿಸಲು ಹೋಗಿಕರ್ತವ್ಯಕ್ಕೆ ಆಗಮಿಸುತ್ತಿದ್ದ ಪಿಎಸ್ಐ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಬೆಳಗಾವಿಯಲ್ಲಿ ರಸ್ತೆ ಅಪಘಾತ: ನಾಯಿ ಜೀವ ಉಳಿಸಲು ಹೋಗಿ ಪಿಎಸ್ಐ ಸಾವು - Yallur Village in Belgaum Taluk
ನಾಯಿಯನ್ನು ಕಾಪಾಡಲು ಹೋಗಿ ಪಿಎಸ್ಐ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತ: ನಾಯಿ ಜೀವ ಉಳಿಸಲು ಹೋಗಿ ಪಿಎಸ್ಐ ಸ್ಥಳದಲ್ಲೇ ಮೃತ
ಪಿಎಸ್ಐ ಎಂ. ಜಿ. ಗಣಾಚಾರಿ ಮೃತರು. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಿಂದ ಬೆಳಗ್ಗೆ 6 ಗಂಟೆಗೆ ನಗರದ ಖಡೇಬಜಾರ್ ಠಾಣೆಗೆ ಕರ್ತವ್ಯಕ್ಕೆಂದು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಇವರು ಬೈಕ್ ಚಲಾಯಿಸುತ್ತಿದ್ದ ವೇಳೆ ನಾಯಿಯು ಅಡ್ಡ ಬಂದಿದ್ದು, ಅದರ ಜೀವ ಉಳಿಸಲು ಹೋಗಿ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.