ಅಥಣಿ: ಯಾವುದೇ ಪರೀಕ್ಷೆಯಿರಲಿ, ಸತತ ಪ್ರಯತ್ನದ ಜೊತೆಗೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಲಭಿಸಲು ಸಾಧ್ಯ. ಯಶಸ್ಸಿಗೆ ಯಾವುದೇ ಸುಲಭ ದಾರಿಗಳಿಲ್ಲ ಎಂದು ಯುಪಿಎಸ್ಸಿ 440ನೇ ರ‍್ಯಾಂಕ್ ಗಳಿಸಿದ ಜಗದೀಶ ಅಡಹಳ್ಳಿ ಹೇಳಿದರು.
ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ: ಜಗದೀಶ ಅಡಹಳ್ಳಿ - Honour to jagadisha adahalli
ಯಶಸ್ಸಿಗೆ ಯಾವುದೇ ಸುಲಭ ದಾರಿಗಳಿಲ್ಲ. ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಯುಪಿಎಸ್ಸಿ ಸಾಧಕ ಜಗದೀಶ ಅಡಹಳ್ಳಿ ತಿಳಿಸಿದರು.
Honour to Jagadish adahalli
ಸ್ಥಳೀಯ ರಾಮಲಿಂಗೇಶ್ವರ ಗಜಾನನ ಯುವಕ ಸಂಘದ ಕಾರ್ಯಾಲಯದಲ್ಲಿ ಅಥಣಿ ತಾಲೂಕು ಮಾಳಿ/ಮಾಲಗಾರ ಸಮಾಜದ ವತಿಯಿಂದ ಜಗದೀಶ ಅಡಹಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ ಅಡಹಳ್ಳಿ, ಯಶಸ್ಸಿಗೆ ಪಾಲಕರ ಹಾಗೂ ಸಮಾಜದ ನಿರಂತರ ಪ್ರೇರಣೆಯೂ ಸಹ ಅವಶ್ಯಕದೆ ಎಂದರು.
ನಂತರ ಮಾಳಿ ಸಮಾಜದ ಮುಖಂಡರಾದ ಶ್ರೀಶೈಲ ಹಳ್ಳದಮಳ, ಮಹಾಂತೇಶ ಮಾಳಿ ಹಾಗೂ ಸಂತೋಷ ಬಡಕಂಬಿ ಅವರು ಮಾತನಾಡಿ, ಜಗದೀಶ ಅಡಹಳ್ಳಿಯವರನ್ನು ಅಭಿನಂದಿಸಿದರು.