ಕರ್ನಾಟಕ

karnataka

ETV Bharat / state

ಹನಿಟ್ರ್ಯಾಪ್​ ಪ್ರಕರಣ: ಗೋಕಾಕ್​ನಲ್ಲಿ ಮಹಿಳೆ ಸೇರಿ ಏಳು ಜನರ ಬಂಧನ - Gokak honeytrap latest news

ಹನಿಟ್ರ್ಯಾಪ್​ ಮೂಲಕ ಯುವಕನ್ನು ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ 6 ಜನರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್

By

Published : Nov 2, 2019, 4:46 PM IST

ಗೋಕಾಕ:ನಗರದಲ್ಲಿ ಹನಿಟ್ರ್ಯಾಪ್​ ಮೂಲಕ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸಮೇತ ಆರು ಜನರನ್ನು ಪೊಲೀಸರು ಬಂಧಿಸಿದ ಘಟನೆ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ ಅಲಿಯಾಸ್​ ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ ಕುಮಾರ್ ಬೆಳಗಾಂವಕರ ಅಲಿಯಾಸ್​ ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ, ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವ ಯುವಕನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಗ್ಯಾಂಗ್​ ಮಹಿಳೆಯೊಂದಿಗೆ ಯುವಕನ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಮೈಮೇಲಿದ್ದ ಬಂಗಾರದ ಸರ ಹಾಗೂ 1 ಸಾವಿರ ರೂಪಾಯಿ ಕಸಿದುಕೊಂಡಿದ್ದಾರೆ. ಅಲ್ಲದೇ 3 ಲಕ್ಷ ಹಣ ನೀಡದಿದ್ದರೆ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ. ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡ ಯುವಕ ತನ್ನ ಗ್ರಾಮಕ್ಕೆ ತೆರಳಿ ತನ್ನ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ.

ಯುವಕನಿಂದ ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಗುರುನಾಥ್​ ಚವ್ಹಾಣ್ ಹಾಗೂ ಪೊಲೀಸ್​ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details