ಕರ್ನಾಟಕ

karnataka

ETV Bharat / state

ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‍ಮೇಲ್: ಇಬ್ಬರು ನಕಲಿ ಪತ್ರಕರ್ತರ ಬಂಧನ

ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಇಬ್ಬರು ನಕಲಿ ಪತ್ರಕರ್ತರು ಪೊಲೀಸರ ಅತಿಥಿಯಾಗಿದ್ದಾರೆ.

Honey trap case, ಹನಿಟ್ರ್ಯಾಪ್ ಪ್ರಕರಣ

By

Published : Nov 11, 2019, 9:15 PM IST

ಗೋಕಾಕ:ಹನಿಟ್ರ್ಯಾಪ್ ಹೆಸರಿನಲ್ಲಿ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಇಲ್ಲಿಯ ಆದಿಜಾಂಬವ ನಗರದ ನಿವಾಸಿ ರವಿ ಕಡಕೋಳ ಹಾಗೂ ಸಂಗಮ ನಗರದ ಸತೀಶ್​ ಹರಿಜನ ಬಂಧಿತರು. ಕೆಲ ದಿನಗಳ ಹಿಂದೆ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದರು.

ಯರಗಟ್ಟಿ ಗ್ರಾಮದ ರಮೇಶ್​ ಮಹಾದೇವ ಕಟ್ಟಿಮನಿ ಎಂಬವರಿಂದ ನಕಲಿ ಪತ್ರಕರ್ತರಿಬ್ಬರು ಪ್ರಕರಣದ ಆರೋಪಿ ಶಿಂಗಳಾಪೂರ ಗ್ರಾಮದ ಲಕ್ಷ್ಮಿ ಹೆಸರು ಹೇಳಿ ಹಣ ದೋಚಲು ಪ್ರಯತ್ನಪಟ್ಟಿದ್ದರು. ಈ ಕುರಿತು ದೂರು ನೀಡಿರುವ ರಮೇಶ್, ಪ್ರಕರಣದಿಂದ ನನ್ನ ಹೆಸರು ತೆಗೆಸುವುದಾಗಿ ಹೇಳಿ ₹ 3 ಲಕ್ಷ ನೀಡುವಂತೆ ನಕಲಿ ಪತ್ರಕರ್ತರು ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಬಂಧಿತರಿಂದ 2 ಮೋಟಾರ ಸೈಕಲ್, 2 ಮೊಬೈಲ್​ ಹಾಗೂ 4 ನಕಲಿ ಪತ್ರಕರ್ತರ ಗುರುತಿನ ಚೀಟಿಗಳನ್ನು ವಶಪಡಿಕೊಂಡಿದ್ದಾರೆ.

ABOUT THE AUTHOR

...view details