ಬೆಳಗಾವಿ:ಮಹಾಮಳೆ ಮುಂದುವರೆದಿದ್ದು, ಕರ್ನಾಟಕ, ಗೋವಾ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದೆ. ಕಳೆದ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಳೆಯ ಆರ್ಭಟಕ್ಕೆ ಧರೆಗುರುಳಿದ ಮನೆಗಳು, ಕುಸಿಯುತ್ತಿದೆ ಗುಡ್ಡ!
ಬೆಳಗಾವಿಯಲ್ಲಿ ನಿಲ್ಲದ ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳುತ್ತಿವೆ. ನಗರದ ಕೆಲವು ಪ್ರದೇಶಗಳು ಈಗಾಗಲೇ ನೀರಿನಲ್ಲಿ ಮುಳುಗಿದ್ದು, ಸಿಲುಕಿ ಹಾಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ.
ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳಿರುವುದು
ಚೋರ್ಲಾ ಘಾಟ್ನಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಗೋವಾ, ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿದ್ದಾರೆ.
ಜಲಾವೃತವಾಗುತ್ತಿವೆ ನಗರಗಳು:ಒಂದೇ ದಿನಕ್ಕೆ 25 ಮನೆಗಳು ಜಲಾವೃತವಾಗಿವೆ. ಬೆಳಗಾವಿಯಲ್ಲಿ ಮುಂದುವರೆದ ಮಳೆಗೆ ನಗರದ ಅನೇಕ ಸ್ಥಳಗಳು ನೀರಲ್ಲಿ ಮುಳುಗುತ್ತಿವೆ. ಇಲ್ಲಿನ ಓಂನಗರ, ಸಮರ್ಥನಗರ, ಟೀಳಕವಾಡಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮನೆಗಳು ಕುಸಿದಿವೆ.