ಅಥಣಿ:ತಾಲೂಕಿನ ಆಸ್ಪತ್ರೆಯಲ್ಲಿ ಎಂಥಾ ಸೀಲ್ ನೀಡಿದ್ದೀರಾ ಕ್ವಾರಂಟೈನ್ ಮಾಡುವ ಸೀಲ್ ಹಾಕಿದ ತಕ್ಷಣವೇ ಕೈಯಿಂದ ಅಳಿಸಬಹುದು ಎಂದು ಸಾರ್ವಜನಿಕರು ಅಥಣಿ ತಾಲೂಕು ವೈದ್ಯಾಧಿಕಾರಿ ಅವರನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಕೈ ಮೇಲಿನ ಕ್ವಾರಂಟೈನ್ ಸೀಲ್ ತಕ್ಷಣವೇ ಅಳಿಸಬಹುದು: ಸೀಲ್ ಬಣ್ಣ ಕಳಪೆನಾ? - home quarantine seal issue
ಅಥಣಿಯಲ್ಲಿ ಹೊರಗಿನಿಂದ ಬರುವವರ ಕೈ ಮೇಲೆ ಹಾಕಿದ ಕ್ವಾರಂಟೈನ್ ಸೀಲ್ ತಕ್ಷಣವೇ ಅಳಿಸಬಹುದಾಗಿದ್ದು, ತಾಲೂಕು ಆರೋಗ್ಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
![ಕೈ ಮೇಲಿನ ಕ್ವಾರಂಟೈನ್ ಸೀಲ್ ತಕ್ಷಣವೇ ಅಳಿಸಬಹುದು: ಸೀಲ್ ಬಣ್ಣ ಕಳಪೆನಾ? home quarantine seal issue from athani](https://etvbharatimages.akamaized.net/etvbharat/prod-images/768-512-7193455-thumbnail-3x2-sealll.jpg)
ಕ್ವಾರಂಟೈನ್ ವ್ಯಕ್ತಿಗಳ ಕೈ ಮೇಲಿನ ಸೀಲ್ ತಕ್ಷಣವೇ ಅಳಿಸಬಹುದು
ಕ್ವಾರಂಟೈನ್ ವ್ಯಕ್ತಿಗಳ ಕೈ ಮೇಲಿನ ಸೀಲ್ ತಕ್ಷಣವೇ ಅಳಿಸಬಹುದು
ಆದರೆ, ಆ ಸೀಲ್ ಬಣ್ಣವನ್ನು ತಕ್ಷಣವೇ ಅಳಿಸಬಹುದಾಗಿದೆ. ಹೀಗಾಗಿ ಅವರು ಎಲ್ಲಿ ಬೇಕಾದರೂ ಓಡಾಟ ಮಾಡಬಹುದು, ಗೊತ್ತೇ ಆಗುವುದಿಲ್ಲ ಎಂದು ಸಾರ್ವಜನಿಕರು ಅಥಣಿ ವೈದ್ಯಾಧಿಕಾರಿ ಮುಂದೆ ವಸ್ತು ಸ್ಥಿತಿ ಮನವರಿಕೆ ಮಾಡಿದರು.