ಕರ್ನಾಟಕ

karnataka

ETV Bharat / state

ಬೆಳಗಾವಿ ಅಧಿವೇಶನದಲ್ಲೇ ಮತಾಂತರ ಮಸೂದೆ ಮಂಡನೆ ಮಾಡೇ ಮಾಡ್ತೇವೆ: ಆರಗ ಜ್ಞಾನೇಂದ್ರ - ಮತಾಂತರ ಕಾಯ್ದೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಆಮಿಷದ ಮತ್ತು ಬಲವಂತದ ಮತಾಂತರ ಆಗಬಾರದಂತಿದೆ. ಬಲವಂತವಾಗಿ ಮತಾಂತರ ಆದರೆ, ಏನ್ ಮಾಡಬೇಕು ಅಂತಾ ಕಾನೂನು ಇಲ್ಲ. ಅದನ್ನ ಈ ಅಧಿವೇಶನಲ್ಲಿ ಈ ಸಂಬಂಧದ ಮಸೂದೆ ಮಂಡನೆ ಮಾಡುತ್ತೇವೆ. ಬಲವಂತವಾಗಿ ಮತಾಂತರ ಮಾಡುವವರಿಗೆ ಶಿಕ್ಷೆ ಆಗಲೇಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

By

Published : Dec 15, 2021, 10:20 PM IST

Updated : Dec 15, 2021, 10:40 PM IST

ಬೆಳಗಾವಿ: ಬಲವಂತವಾಗಿ ಮತಾಂತರ ಆದರೆ, ಏನ್ ಮಾಡಬೇಕು ಅಂತಾ ಕಾನೂನು ಇಲ್ಲ. ಹೀಗಾಗಿ ಇದೇ ಅಧಿವೇಶನದಲ್ಲೇ ಮತಾಂತರ ಕಾಯ್ದೆಯನ್ನ ಜಾರಿ ಮಾಡೇ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು‌.

ಮತಾಂತರ ಕಾಯ್ದೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ಕಾಯ್ದೆ ಬಗ್ಗೆ ಈಗಾಗಲೇ ಹೇಳಿಕೆ ಕೊಟ್ಟಿದ್ದೇನೆ. ಮತಾಂತರ ನಿಷೇಧ ಮಸೂದೆ ತಯಾರಿ ಅಂತಿಮ ಹಂತಕ್ಕೆ ಬಂದಿದೆ. ಇದೇ ಅಧಿವೇಶನದಲ್ಲಿ ಅದನ್ನ ಮಂಡನೆ ಮಾಡುತ್ತೇವೆ‌. ವಿಧೇಯಕ ಮಂಡನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಯಾರೇ ವಿರೋಧ ಮಾಡಿದ್ರೂ ಕಾಯ್ದೆ ಜಾರಿಗೆ ತಂದೇ ತರ್ತೇವಿ ಎಂದರು.

ಬಲವಂತವಾಗಿ ಮತಾಂತರ ಮಾಡುವುದು ತಪ್ಪು. ಹೀಗಾಗಿ ಅಂತಹವರಿಗೆ ‌ಕಠಿಣ ಶಿಕ್ಷೆಯಾಗಲೇಬೇಕು. ಸಂವಿಧಾನದ 25ನೇ ಕಲಂ ಅಡಿ ಯಾವ ವ್ಯಕ್ತಿ ಯಾವ ಧರ್ಮದಲ್ಲಿ ಜನಿಸಿರುತ್ತಾನೆ ಅದರಲ್ಲಿಯೇ ಇರಬೇಕು ಅಂತಾ ಇದೆ. ಆಮಿಷದ ಮತ್ತು ಬಲವಂತದ ಮತಾಂತರ ಆಗಬಾರದು. ಬಲವಂತವಾಗಿ ಮತಾಂತರ ಆದರೆ ಏನ್ ಮಾಡಬೇಕು ಅಂತಾ ಕಾನೂನು ಇಲ್ಲ. ಅದನ್ನ ಈ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ. ಬಲವಂತವಾಗಿ ಮತಾಂತರ ಮಾಡುವವರಿಗೆ ಶಿಕ್ಷೆ ಆಗಲೇಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Last Updated : Dec 15, 2021, 10:40 PM IST

ABOUT THE AUTHOR

...view details