ಕರ್ನಾಟಕ

karnataka

By

Published : Nov 2, 2019, 10:00 AM IST

ETV Bharat / state

ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿಪ್ಪರಗಿ ನಿರಾಶ್ರಿತರ ಉಪವಾಸ ಸತ್ಯಾಗ್ರಹ

ಹಿಪ್ಪರಗಿ ಅಣೆಕಟ್ಟೆಯ ಹಿನ್ನೀರಿನ ಪ್ರವಾಹಕ್ಕೊಳಗಾಗಿರುವ ಮನೆಗಳಿಗೆ ಶಾಶ್ವತ ಪರಿಹಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ಸಾಲ ಮನ್ನಾಕ್ಕೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿಪ್ಪರಗಿ ನಿರಾಶ್ರಿತರ ಉಪವಾಸ ಸತ್ಯಾಗ್ರಹ

ಅಥಣಿ: ಹಿಪ್ಪರಗಿ ಅಣೆಕಟ್ಟೆಯ ಹಿನ್ನೀರಿನ ಪ್ರವಾಹಕ್ಕೊಳಗಾಗಿರುವ ಮನೆಗಳಿಗೆ ಶಾಶ್ವತ ಪರಿಹಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ಸಾಲ ಮನ್ನಾಕ್ಕೆ ಆಗ್ರಹಿಸಿ,ಅಥಣಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿಪ್ಪರಗಿ ನಿರಾಶ್ರಿತರ ಉಪವಾಸ ಸತ್ಯಾಗ್ರಹ

ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ,ಇಂಗಳಗಾಂವ, ದರೂರ, ಅವರಕೋಡ ಹಾಗೂ ಹಲವು ನೆರೆ ಸಂತ್ರಸ್ತ ಗ್ರಾಮಗಳಿಗೆ ಇನ್ನೂ ಪರಿಹಾರ ಬಂದಿಲ್ಲ. ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು,ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರಿಗೆ ಅಥಣಿ ಭಾರತೀಯ ಕಿಸಾನ್ ಸಂಘಟನೆ ಕೂಡ ಬೆಂಬಲ ನೀಡಿದೆ. ಸ್ಥಳಾಕ್ಕಾಮಿಸಿದ ತಹಶೀಲ್ದಾರ್​ ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬರುವರಿಗೆ ನಾವು ಉಪವಾಸ ಸತ್ಯಾಗ್ರಹ ಮುಂದೂಡುತ್ತೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details