ಕರ್ನಾಟಕ

karnataka

ETV Bharat / state

ಖಾನಾಪುರದಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು.. ಕೇಸರಿ ಶಾಲು ಹಾಕಿ ಕಾಲೇಜ್‌ಗೆ ಬಂದ್ ವಿದ್ಯಾರ್ಥಿಗಳು.. - Mahatma Gandhi PU College

ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಯಲ್ಲಿ ವಿದ್ಯಾರ್ಥಿನಿಯರು ಕುಳಿತ ಹಿನ್ನೆಲೆ ಕೆಲ ಯುವಕರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು..

ಹಿಜಾಬ್ ಕೇಸರಿ ಶಾಲು ವಿವಾದ
ಹಿಜಾಬ್ ಕೇಸರಿ ಶಾಲು ವಿವಾದ

By

Published : Feb 18, 2022, 12:36 PM IST

ಬೆಳಗಾವಿ: ಹಿಜಾಬ್ ಧರಿಸಿ ತರಗತಿಯಲ್ಲಿ ವಿದ್ಯಾರ್ಥಿನಿಯರು ಕುಳಿತ ಹಿನ್ನೆಲೆ ಕೆಲ ಯುವಕರು ಮತ್ತೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಘಟನೆ ಖಾನಾಪೂರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜ್​ನಲ್ಲಿ ಸಮವಸ್ತ್ರ ನಿಯಮಾವಳಿ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ, ತರಗತಿಗಳಲ್ಲಿ ಕುಳಿತಿದ್ದಾರೆ.

ಇದನ್ನ ಗಮನಿಸಿದ ಕೆಲ ಯುವಕರು ಕೇಸರಿ ಶಾಲನ್ನು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ‌ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಹಿಜಾಬ್ ಬೆನ್ನಲ್ಲೇ ತಲೆ ಎತ್ತಿದ ಸಿಂಧೂರ ವಿವಾದ; ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ

ಜೊತೆಗೆ ಕಾಲೇಜಿನಲ್ಲಿ ಉಂಟಾಗಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಹಿನ್ನೆಲೆ ಕಾಲೇಜು ‌ಆಡಳಿತ ಮಂಡಳಿ ನೇತೃತ್ವದಲ್ಲಿ ಎರಡು‌ ಸಮುದಾಯದ ಮುಖಂಡರನ್ನ ಕರೆಯಿಸಿ ಸಭೆ ಮಾಡಲಾಗುತ್ತಿದ್ದು, ಪರಿಸ್ಥಿತಿ ಶಾಂತವಾಗಿದೆ. ಇನ್ನೊಂದೆಡೆ, ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನ ಕಾಲೇಜ್​ನಿಂದ ವಾಪಸ್ ಕಳುಹಿಸಲಾಗಿದೆ.

ABOUT THE AUTHOR

...view details