ಬೆಳಗಾವಿ:ರಾಜ್ಯದಲ್ಲಿ ನೀರು ಲಭ್ಯತೆ ದೃಷ್ಟಿಯಿಂದ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದ್ದು, ಮಹದಾಯಿ ವಿಚಾರವಾಗಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಲಾಕ್ಡೌನ್ ನಂತರ ಚರ್ಚಿಸುವುದಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿಗೆ ಈಗಾಗಲೇ ಸಚಿವ ಸಂಪುಟದಲ್ಲಿ 800 ಕೋಟಿ ರೂ.ಗಳ ಅನುಮೋದನೆ ಪಡೆದುಕೊಂಡಿದೆ. ಅಲ್ಲದೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರದ ಸಿಡಬ್ಲ್ಯುಸಿ ಬೋರ್ಡ್ಗೆ ಕಳುಹಿಸಲಾಗಿದ್ದು, ಅದು ಕ್ಲಿಯರ್ ಆದ ತಕ್ಷಣ ಇನ್ನುಳಿದ ಅಡೆತಡೆಗಳನ್ನು ಪರಿಹರಿಸಿಕೊಂಡು ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದರು.