ಬೆಳಗಾವಿ:ಬಿಮ್ಸ್ ಅವಾಂತರಕ್ಕೆ ಕಡಿವಾಣ ಹಾಕಲು ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಬಿಮ್ಸ್ನಲ್ಲಿ ಸಮನ್ವಯತೆಗೆ ಉನ್ನತ ಮಟ್ಟದ ಸಭೆ; ಸಚಿವ ಸುರೇಶ ಅಂಗಡಿ - Minister Suresh Angadi
"ಬೆಳಗಾವಿ ಜಿಲ್ಲೆಯ ಶಾಸಕರು, ಬಿಮ್ಸ್ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ಜೊತೆಗೆ ಜಂಟಿಯಾಗಿ ಸಭೆ ನಡೆಸಲಾಗಿದೆ. ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಸಮನ್ವಯತೆ ಕೊರತೆಯಿಂದ ಸಮಸ್ಯೆ ಕಾಣಿಸುತ್ತಿದ್ದವು. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ತಿಳಿಸಿದರು.
ಸಚಿವ ಸುರೇಶ ಅಂಗಡಿ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಶಾಸಕರು, ಬಿಮ್ಸ್ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ಜೊತೆಗೆ ಜಂಟಿಯಾಗಿ ಸಭೆ ನಡೆಸಲಾಗಿದೆ. ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಇಷ್ಟುದಿನ ಸಮನ್ವಯತೆ ಕೊರತೆಯಿಂದ ಸಮಸ್ಯೆ ಕಾಣಿಸುತ್ತಿದ್ದವು. ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ ಎಂದರು.
ಕೊರೊನಾ ಬಗ್ಗೆ ಯಾರೂ ಹೆದರಬಾರದು. ಸೋಂಕಿತರು ವೈದ್ಯರ ಸಲಹೆ ಪಾಲಿಸಬೇಕು. ಬಿಸಿ ನೀರು ಸೇವನೆ, ಮಾತ್ರೆ ತೆಗೆದುಕೊಂಡರೆ ಕೊರೊನಾದಿಂದ ಗುಣಮುಖರಾಗಬಹುದು. ವೈದ್ಯರ ಸಲಹೆಗಳನ್ನು ಸೋಂಕಿತರು ತಪ್ಪದೇ ಪಾಲಿಸಬೇಕು ಎಂದರು.