ಚಿಕ್ಕೋಡಿ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸಚಿವರಾಗ್ತಿದ್ರು ಜಾರಕಿಹೊಳಿ ಬ್ರದರ್ಸ್. ಆದ್ರೆ ಈಗ ಕೌಟುಂಬಿಕ ಸಚಿವ ಸ್ಥಾನದ ಸಂಪ್ರದಾಯಕ್ಕೆ ಬಿಜೆಪಿ ಹೈ ಕಮಾಂಡ್ ಬ್ರೇಕ್ ಹಾಕಿದೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜಾರಕಿಹೊಳಿಗೆ ಬಿಜೆಪಿಯಿಂದ ಬಿಗ್ ಶಾಕ್ - political news
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಶಾಕ್ ನೀಡಿದೆ.
ಬಾಲಚಂದ್ರ ಜಾರಕಿಹೊಳಿ - ಅರಭಾವಿ ಬಿಜೆಪಿ ಶಾಸಕ
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸಚಿವ ಸ್ಥಾನದ ಭಾಗ್ಯ ಜಾರಕಿಹೊಳಿ ಕುಟುಂಬದಲ್ಲಿ ಒಬ್ಬರಿಗಾದರೂ ಸಿಗುತಿತ್ತು. ಹಾಗೆ ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಾಲಚಂದ್ರ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಶಾಕ್ ನೀಡಿದೆ.
ಮನೆ ಕಟ್ಟಿಕೊಡಲಿಲ್ಲ ಎಂದರೆ ಸರ್ಕಾರ ಬೀಳಿಸ್ತಿವಿ ಎಂದು ಬಾಲಚಂದ್ರ ಜಾರಕಿಹೊಳಿ ಮೊನ್ನೆ ಮೊನ್ನೆಯಷ್ಟೆ ತಮಾಶೆಯ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಮುಳುವಾಯ್ತಾ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.