ಬೆಳಗಾವಿ:ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನಾಳೆ ವೇಳೆಗೆ ಹಿಡಕಲ್ ಜಲಾಶಯ ಶೇ. 80ರಷ್ಟು ಭರ್ತಿಯಾಗುವ ಸಾಧ್ಯತೆಯಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿರುವ ಜಲಾಶಯದಲ್ಲಿ ಒಳ ಹರಿವು ಪ್ರಮಾಣ ಇದೇ ರೀತಿ ಮುಂದುವರೆದಲ್ಲಿ ಘಟಪ್ರಭಾ ನದಿಗೆ ನೀರು ಬಿಡುಗಡೆ ಅನಿವಾರ್ಯ ಆಗುತ್ತದೆ.
ಭರ್ತಿ ಹಂತಕ್ಕೆ ತಲುಪಿದ ಹಿಡಕಲ್ ಜಲಾಶಯ: ನದಿಪಾತ್ರದ ಜನರಿಗೆ ಎಚ್ಚರಿಕೆ - reservoir latest news
ಹಿಡಕಲ್ ಗ್ರಾಮದಲ್ಲಿರುವ ಜಲಾಶಯದಲ್ಲಿ ಒಳ ಹರಿವು ಪ್ರಮಾಣ ಹೆಚ್ಚಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿಪಾತ್ರದ ಜನರಿಗೆ ಜಲಾಶಯದ ಅಧೀಕ್ಷಕ ಎಂಜಿನಿಯರ್ ಆರ್.ಬಿ. ದಾಮಣ್ಣವರ್ ಸೂಚನೆ ನೀಡಿದ್ದಾರೆ.
ಭರ್ತಿ ಹಂತಕ್ಕೆ ತಲುಪಿದ ಹಿಡಕಲ್ ಜಲಾಶಯ
ಜಲಾಶಯದ ಕ್ರಸ್ಟ್ ಗೇಟ್ ಮೂಲಕ ನೀರು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಘಟಪ್ರಭಾ, ಹಿರಣ್ಯಕೇಶಿ ನದಿಪಾತ್ರದ ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹಿಡಕಲ್ ಜಲಾಶಯದ ಅಧೀಕ್ಷಕ ಎಂಜಿನಿಯರ್ ಆರ್.ಬಿ. ದಾಮಣ್ಣವರ ಸೂಚನೆ ನೀಡಿದ್ದಾರೆ.
ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಯಾದರೆ ಘಟಪ್ರಭಾ ನದಿ ತೀರದಲ್ಲಿ ಈ ವರ್ಷವೂ ಪ್ರವಾಹ ಭೀತಿ ಎದುರಾಗಲಿದೆ.