ಚಿಕ್ಕೋಡಿ:ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣಕ್ಕೆ ಕತ್ತರಿ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ನಡೆದಿದೆ.
ನರೇಗಾ ಕೂಲಿ ಹಣಕ್ಕೆ ಕತ್ತರಿ: ಗ್ರಾಪಂಗೆ ಬೀಗ ಹಾಕಿ ಮಹಿಳೆಯರಿಂದ ಪ್ರತಿಭಟನೆ - ಚಿಕ್ಕೋಡಿ ನರೇಗಾ ಕಾರ್ಮಿಕರ ಪ್ರತಿಭಟನೆ ಸುದ್ದಿ
ಸರ್ಕಾರ ನರೇಗಾ ಕೂಲಿ ಮೊತ್ತವನ್ನು 250ರಿಂದ 275ಕ್ಕೆ ಹೆಚ್ಚಳ ಮಾಡಿದ್ದರೂ 220 ರೂಪಾಯಿ ಕೂಲಿ ನೀಡಿರುವುದಾಗಿ ಆರೋಪಿಸಿ ಹಿಡಕಲ್ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ನರೇಗಾ ಕೂಲಿ ಮೊತ್ತವನ್ನು 250ರಿಂದ 275ಕ್ಕೆ ಸರ್ಕಾರ ಹೆಚ್ಚಿಸಿದೆ. ಆದರೆ 275 ರೂಪಾಯಿ ಬದಲು 220 ರೂಪಾಯಿ ಕೂಲಿ ನೀಡಿರುವುದಾಗಿ ಆರೋಪಿಸಿ ಹಿಡಕಲ್ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯತಿ ಪಿಡಿಒ ರಾಘವೇಂದ್ರ ಮೊರಬ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಿಂದ ಪಿಡಿಒ ರಾಘವೇಂದ್ರ ಕಾಲ್ಕಿತ್ತಿದರು. ಸರ್ಕಾರ ನಿಗದಿ ಮಾಡಿರುವ ಕೂಲಿ ನೀಡುವಂತೆ ಕೂಲಿ ಕಾರ್ಮಿಕರು ಆಗ್ರಹಿಸಿದ್ದಾರೆ. ಅಲ್ಲದೆ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಬ್ಬಂದಿಯನ್ನು ಹೊರ ಹಾಕಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.