ಕರ್ನಾಟಕ

karnataka

ETV Bharat / state

ಡಿಸಿಎಂ ಹೇಳಿದ್ರು ಈ ಸ್ಟೋರಿ... ನಾವ್ಯಾಕೆ ಹಲೋ ಎನ್ನಬೇಕು? - dcm lakshman savadi latest news

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ರೈತರೆದುರು ಹಲೋ ಕಥೆ ಹೇಳಿದ್ದಾರೆ.

Hello story by DCM Lakshman Savadi
ಡಿಸಿಎಂ ಹೇಳಿದ್ರು ಹೆಲೋ ಸ್ಟೋರಿ...ನಾವ್ಯಾಕೆ ಹೆಲೋ ಎನ್ನಬೇಕು?

By

Published : Jan 25, 2020, 10:17 PM IST

ಬೆಳಗಾವಿ: ಕಾಲ್ ರಿಸಿವ್ ಮಾಡುವಾಗ ಪ್ರತಿಯೊಬ್ಬರೂ ಹಲೋ ಎನ್ನುತ್ತಾರೆ. ಈ ಹಲೋ ಯಾರು ಅಂತಿರಾ? ಈ ಕುರಿತಾಗಿ ಡಿಸಿಎಂ ಲಕ್ಷ್ಮಣ್ ಸವದಿ ಅವರೊಂದು ಹಲೋ ಕಥೆ ಹೇಳಿದ್ದಾರೆ.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಸವದಿ ರೈತರೆದುರು ಈ ಹಲೋ ಕಥೆ ಹೇಳಿದ್ದಾರೆ.

ಡಿಸಿಎಂ ಹೇಳಿದ್ರು ಹಲೋ ಸ್ಟೋರಿ...ನಾವ್ಯಾಕೆ ಹಲೋ ಎನ್ನಬೇಕು?

ಟೆಲಿಫೋನ್ ಕಂಡು ಹಿಡಿದ ಸೈಂಟಿಸ್ಟ್‌ನ ಲವರ್ ಹೆಸರು 'ಹಲೋ'. ಫೋನ್ ಕಂಡು ಹಿಡಿದ ಬಳಿಕ ಯಾರಿಗೆ ಕರೆ ಮಾಡಬೇಕು ಅಂತ ತಿಳಿಯದೇ ಪ್ರೇಯಸಿಗೆ ಕರೆ ಮಾಡಿದರು. ಪ್ರೇಯಸಿ ಕರೆ ಸ್ವೀಕರಿಸುತ್ತಿದ್ದಂತೆ ಸೈಂಟಿಸ್ಟ್‌ ಹಲೋ ಎಂದು ಹೇಳಿದರು. ಅಂದಿನಿಂದ ನಾವೆಲ್ಲರೂ ಸಹ ಫೋನ್ ಸ್ವೀಕರಿಸುವಾಗ ಹಲೋ ಅಂತಿದ್ದೇವೆ ಎಂದು ಮಾಹಿತಿ ನೀಡಿದರು.

ವಿಜ್ಞಾನಿ ಪ್ರೇಯಸಿಗೆ ಮೊದಲ ಸಲ ಕರೆ ಮಾಡಿ ಹಲೋ ಅಂದ, ನಾವೇಕೆ ಹಲೋ ಅನ್ನಬೇಕು. ನಮಗೂ ವಿಜ್ಞಾನಿಗೆ ಏನು ಸಂಬಂಧ. ನಮ್ಮ ರೈತರು ಫೋನ್ ರಿಸೀವ್ ಮಾಡಿದಾಗ 'ಜೈ ಕಿಸಾನ್' ಅನ್ನಬೇಕು. ಅಧಿಕಾರಿಗಳು ‌'ಜೈ ಜವಾನ್' ಅನ್ನಬೇಕು. ನಮ್ಮ ದೇಶಕ್ಕೆ ಅನ್ನ ಕೊಡೋರು, ದೇಶ ರಕ್ಷಣೆ ಮಾಡೋರನ್ನು ನೆನಪಿಸಬೇಕು. ಇನ್ಮುಂದೆ ವಿಜ್ಞಾನಿಯ ಪ್ರೇಯಸಿ ಹೆಸರು ನಿತ್ಯ ನೆನೆಯೊದನ್ನು ಬಿಡೋಣ. ನಾವೆಲ್ಲಾ ರೈತರು, ಫೋನ್ ಬಂದ್ಮೇಲೆ ಜೈ ಜವಾನ್ ಎನ್ನಬೇಕು ಎಂದು ಡಿಸಿಎಂ ಮನವಿ ಮಾಡಿಕೊಂಡರು.

ABOUT THE AUTHOR

...view details