ಅಥಣಿ (ಬೆಳಗಾವಿ) :ತಾಲೂಕಿನ ಐಗಳಿ ಕ್ರಾಸ್‌ನಿಂದ ಕೊಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸಿದ್ದಿ ಪುರುಷ ಅಪ್ಪಯ್ಯ ಸ್ವಾಮೀಜಿಮಠ ಸಮೀಪದ ಹೀರೆಹಳ್ಳದ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸ್ವಲ್ಪ ಯಾಮಾರಿದರೆ ಹಳ್ಳಕ್ಕೆ ಬೀಳುವುದು ಖಚಿತವಾಗಿದೆ.
ತಡೆಗೋಡೆಯಿಲ್ಲದೆ ಬಲಿಗಾಗಿ ಕಾದು ಕುಳಿತಿದೆ ಹೀರೆಹಳ್ಳ ಸೇತುವೆ.. - Road works
ಕಳೆದ ತಿಂಗಳು ಲೋಕೋಪಯೋಗಿ ಇಲಾಖೆಯಿಂದ ಕೋಹಳ್ಳಿಯಿಂದ ಐಗಳಿ ಕ್ರಾಸ್ವರೆಗೆ 8 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಹೀರೆಹಳ್ಳ ತಲುಪಲು ಸೇತುವೆ ಸಹಾಯದಿಂದ ದಾಟಬೇಕು, ಸೇತುವೆಗೆ ಅಕ್ಕಪಕ್ಕ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚಾರ ಮಾಡುವ ವಾತಾವರಣ ಸೃಷ್ಟಿಯಾಗಿದೆ.

ಸ್ಥಳೀಯರು ದರೇಪ್ಪ ಮೂತ್ತೂರ ಮಾತನಾಡಿ, ಈ ರಸ್ತೆ ಐಗಳಿ ಕ್ರಾಸ್‌ನಿಂದ ಬರುವಾಗ ಇಳಿಜಾರಾದ ಕಾರಣ ವಾಹನ ವೇಗವಾಗಿ ಚಲಿಸುತ್ತದೆ. ಎದುರಿಗೆ ಒಮ್ಮೆಲೇ ತಿರುವು ಇರುವುದರಿಂದ ಹಾಗೂ ಅಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರುವುದರಿಂದ ಹಠಾತ್ತನೆ ಎದುರಿಗೆ ವಾಹನ ಬರುವುದರಿಂದ ಚಾಲಕರು ಆತಂಕಕ್ಕೆ ಒಳಗಾಗಿ ಈ ಹಳ್ಳದಲ್ಲಿ ಬಿದ್ದಿರುವ ಎಷ್ಟೋ ನಿದರ್ಶನ ನಮ್ಮ ಮುಂದೆ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಈ ಸೇತುವೆಗೆ ತಡೆ ಗೋಡೆ ನಿರ್ಮಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.