ಕರ್ನಾಟಕ

karnataka

ETV Bharat / state

ರಮೇಶ, ಹೆಬ್ಬಾಳ್ಕರ್ ವೈಮನಸ್ಸು ಸಂಧಾನಕ್ಕೆ ಬಂದ್ರಾ ಇವರು? - PLD Bank Election

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ರಮೇಶ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ವೈಮನಸ್ಸಿನ ಸಂಧಾನಕ್ಕೆ ಹೆಬ್ಬಾಳ್ಕರ್​ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಮುಂದಾಗಿದ್ದಾರೆ ಎಂಬ ಅನುಮಾನ ಮೂಡಿದೆ.

hebbalkar-brother-met-the-ramesh-jarajiholi

By

Published : Oct 5, 2019, 9:28 PM IST

ಬೆಳಗಾವಿ:ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮುನಿಸಿಗೆ ಹೊಸ ತಿರುವು ಸಿಕ್ಕಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಮೇಶ ಹಾಗೂ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಗೌಪ್ಯ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಒಂದು ಕಾಲದಲ್ಲಿ ಅತ್ಯಾಪ್ತರಾಗಿದ್ದ ರಮೇಶ ಮತ್ತು ಹೆಬ್ಬಾಳ್ಕರ್, ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ನಂತರ ಹಾವು ಮುಂಗುಸಿಯಂತಾಗಿದ್ದಾರೆ. ಇಂದಿನ ಬೆಳವಣಿಗೆ ಇವರಿಬ್ಬರ ನಡುವಿನ ವೈಮನಸ್ಸಿನ ಸಂಧಾನಕ್ಕೆ ಚೆನ್ನರಾಜ್ ಸಂಪರ್ಕ ಸೇತುವೆಯಾದ್ರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ

ರಮೇಶ್ ಮತ್ತು ಚೆನ್ನರಾಜ್ ಕೆಲ ಹೊತ್ತು ಮಾತುಕತೆ ನಡೆಸಿದರು. ಚೆನ್ನರಾಜ್ ಜತೆಗೆ ಹೆಬ್ಬಾಳ್ಕರ್ ಆಪ್ತ ಹಾಗೂ ಬುಡಾ ಮಾಜಿ ಅಧ್ಯಕ್ಷ ಯುವರಾಜ ಕದಂ‌ ಕೂಡ ಆಗಮಿಸಿದ್ದರು. ಸಭೆ ಬಳಿಕ ಚೆನ್ನರಾಜ ಹಾಗೂ ಯುವರಾಜ ಅವರು ಹೆಬ್ಬಾಳ್ಕರ್ ಬಳಸುವ ವಾಹನದಲ್ಲಿ ತೆರಳಿದರು. ರಮೇಶ ಜಾರಕಿಹೊಳಿ ಮಾಧ್ಯಮಗಳ ಕಣ್ಣಿಗೆ ಕಾಣದೇ ಹಿಂಬಾಗಿಲಿನಿಂದ‌ ಗೋಕಾಕ್​ಗೆ ತೆರಳಿದರು.

ABOUT THE AUTHOR

...view details