ಬೆಳಗಾವಿ: ಗೋಕಾಕ್ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಳುಗಡೆ ಭೀತಿಯಲ್ಲಿರುವ ಹಲವು ಗ್ರಾಮಗಳಿಗೆ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಭೇಟಿ ನೀಡಿದರು.
ಗೋಕಾಕ್ನಲ್ಲಿ ಮಳೆಯ ಅಬ್ಬರ... ಮುಳುಗಡೆ ಭೀತಿಯಲ್ಲಿನ ಗ್ರಾಮಗಳಿಗೆ ಲಖನ್ ಜಾರಕಿಹೊಳಿ ಭೇಟಿ - ಗೋಕಾಕ್ನಲ್ಲಿ ಗ್ರಾಮಗಳಿಗೆ ಮುಳುಗಡೆ ಭೀತಿ ಸುದ್ದಿ
ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಳುಗಡೆ ಭೀತಿಯಲ್ಲಿರುವ ಗ್ರಾಮಗಳಿಗೆ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಭೇಟಿ ನೀಡಿದರು.
![ಗೋಕಾಕ್ನಲ್ಲಿ ಮಳೆಯ ಅಬ್ಬರ... ಮುಳುಗಡೆ ಭೀತಿಯಲ್ಲಿನ ಗ್ರಾಮಗಳಿಗೆ ಲಖನ್ ಜಾರಕಿಹೊಳಿ ಭೇಟಿ](https://etvbharatimages.akamaized.net/etvbharat/prod-images/768-512-4816828-thumbnail-3x2-surya.jpg)
ಬೆಳಗಾವಿಯಲ್ಲಿ ಮಳೆಯ ಅಬ್ಬರ
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿ ಪ್ರವಾಹದ ಆತಂಕದಲ್ಲಿರುವ ಗ್ರಾಮಗಳಿಗೆ ಭೇಟಿ ಕೊಟ್ಟ ಲಖನ್ ಜಾರಕಿಹೊಳಿ, ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜನರಲ್ಲಿ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಘಟಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ ತುಂಬಿರುವ ಜಲಾಶಯದ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಗೋಕಾಕ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಸಂಭಾವ್ಯ ಅಭ್ಯರ್ಥಿಯಾಗಿರುವ ಲಖನ್, ಮಳೆ ಅವಾಂತರ ವೀಕ್ಷಿಸಲು ಸರ್ಕಾರಿ ಬಸ್ನಲ್ಲಿ ತೆರಳಿದ್ದರು.
Last Updated : Oct 21, 2019, 9:32 AM IST