ಕರ್ನಾಟಕ

karnataka

ETV Bharat / state

ಉಕ್ಕಿ ಹರಿಯುತ್ತಿರುವ ಚಿಕ್ಕೊತ್ರಾ ನದಿ : ಜಾನುವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು - ಚಿಕ್ಕೋಡಿ ಉಪವಿಭಾಗದಲ್ಲಿ ಧಾರಾಕಾರ ಮಳೆ

ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸಾಯಂಕಾಲ ನೀರು ಬಿಡುವ ಮಾಹಿತಿ ಇದೆ. ಜಿಲ್ಲಾಡಳಿತದ ಆದೇಶ ಮೇರಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಸಹಾಯದಿಂದ ಗ್ರಾಮಸ್ಥರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ..

ಜಾನವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು
ಜಾನವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು

By

Published : Jul 23, 2021, 3:50 PM IST

ಚಿಕ್ಕೋಡಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳು ಸೇರಿದಂತೆ ಚಿಕ್ಕೋಡಿ ಉಪವಿಭಾಗದಲ್ಲಿ ಸತತವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಮೂರ ದಿನಗಳಿಂದ ಸುರಿಯುತ್ತಿರುವ ಮಳೆಗೆ ನಿಪ್ಪಾಣಿ ತಾಲೂಕಿನಲ್ಲೀಗ ಪ್ರವಾಹದ ಭೀತಿ ಎದುರಾಗಿದ್ದು, ಹಲವು ಗ್ರಾಮದ ಜನರನ್ನು ಕಾಳಜಿ ಕೆಂದ್ರಗಳಿಗೆ ಸ್ಥಳಾತಂರಿಸಲಾಗುತ್ತಿದೆ.

ಜಾನುವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು

ನಿಪ್ಪಾಣಿ ತಾಲೂಕಿನ ಕೊಡಿನಿ, ಸಂಕೇಶ್ವರ ಗ್ರಾಮಗಳ ಗ್ರಾಮಸ್ಥರು ಈಗಾಗಲೇ ಜಿಲ್ಲಾಡಳಿತದ ಆದೇಶದಂತೆ ಪ್ರವಾಹ ಭೀತಿಯ ಹಿನ್ನೆಲೆ ಜಿಲ್ಲಾಡಳಿತ ನಿರ್ಮಿಸಿರುವ ಕಾಳಜಿ ಕೇಂದ್ರಗಳಿಗೆ ತೆರಳಿದ್ದಾರೆ.

ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸಾಯಂಕಾಲ ನೀರು ಬಿಡುವ ಮಾಹಿತಿ ಇದೆ. ಜಿಲ್ಲಾಡಳಿತದ ಆದೇಶ ಮೇರಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಸಹಾಯದಿಂದ ಗ್ರಾಮಸ್ಥರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ.

ಇನ್ನು, ಕೊಡಣಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಎನ್‌ಡಿಆರ್‌ಎಫ್​ ತಂಡ ಗ್ರಾಮಸ್ಥರನ್ನ ರಕ್ಷಣೆ ಮಾಡಿ ಕಾಳಜಿ ಕೇಂದ್ರಗಳಿಗೆ ಬಿಡುತ್ತಿದ್ದಾರೆ. ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿರುವ ಚಿಕ್ಕೊತ್ರಾ ನದಿಗೆ ಗ್ರಾಮದಲ್ಲಿ 300ಕ್ಕೂ ಅಧಿಕ ಜನ ಸಿಲುಕಿದ್ದು,ಅವರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಲಾಗುತ್ತಿದೆ.‌

ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಹಳೆಯ ಕಟ್ಟಡ :

ಇನ್ನು, ಕುಂದಾನಗರಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನೋಡ ನೋಡುತ್ತಿದ್ದಂತೆ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿರುವ ಘಟನೆ ನಡೆದಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ನಗರದ ಖಡೇಬಜಾರ್‌ನಲ್ಲಿರುವ ಹಳೆಯ ಕಟ್ಟಡ ಕುಸಿಯುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಸ್ಥಳದಲ್ಲಿ ಯಾರೂ ಸಾರ್ವಜನಿಕರು ಇರದ ಹಿನ್ನೆಲೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಇದಲ್ಲದೇ ಖಾನಾಪುರ ತಾಲೂಕಿನ ಭಟ್ ಗಲ್ಲಿಯಲ್ಲಿನ ಸಾಹೇಬಿ ಕಿತ್ತೂರು ಎಂಬುವರ ಹಳೆಯ ಗೋಡೆ ಕುಸಿದು ಬಿದ್ದಿದೆ. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ : ವರುಣನ ಆರ್ಭಟಕ್ಕೆ ಹಲವೆಡೆ ಭೂಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ರೈಲು..ಪ್ರಯಾಣಿಕರ ಪರದಾಟ!

ABOUT THE AUTHOR

...view details