ಅಥಣಿ: ಅಥಣಿ ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಯಲ್ಲಮವಾಡಿ ಯಲ್ಲಮ್ಮ ದೇವಾಲಯ ಜಲಾವೃತವಾಗಿದೆ.
ಅಥಣಿಯಲ್ಲಿ ಕುಂಭದ್ರೋಣ ಮಳೆಗೆ ಕೋಕಟನೂರ ಯಲ್ಲಮ್ಮ ದೇವಾಲಯ ಜಲಾವೃತ - ಅಥಣಿಯಲ್ಲಿ ಯಲ್ಲಮ್ಮ ದೇವಾಲಯ ಜಲಾವೃತ
ಅಥಣಿ ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಯಲ್ಲಮವಾಡಿ ಕೆರೆ ತುಂಬಿದ ಪರಿಣಾಮವಾಗಿ ಹೆಚ್ಚಾದ ನೀರು ಹಳ್ಳದ ಮುಖಾಂತರ ಹರಿಯುತ್ತಿದ್ದು, ಯಲ್ಲಮ್ಮ ದೇವಾಲಯ ಜಲಾವೃತವಾಗಿದೆ.

ಕೋಕಟನೂರ ಯಲ್ಲಮ್ಮನ ದೇವಸ್ಥಾನ ಜಲಾವೃತ
ಕೋಕಟನೂರ ಯಲ್ಲಮ್ಮ ದೇವಾಲಯ ಜಲಾವೃತ
ಯಲ್ಲಮವಾಡಿ ಕೆರೆ ತುಂಬಿದ ಪರಿಣಾಮವಾಗಿ ಹೆಚ್ಚಾದ ನೀರು ಹಳ್ಳದ ಮುಖಾಂತರ ಹರಿಯುತ್ತದೆ. ಇದರಿಂದ ದೇವಾಸ್ಥಾದ ಗರ್ಭಗುಡಿಗೆ ನೀರು ನುಗ್ಗಿದೆ. ಭಕ್ತರು ದೂರದಿಂದಲೇ ದೇವಿಯ ದರ್ಶನ ಪಡೆದು ನಮಸ್ಕರಿಸುತಿದ್ದಾರೆ. ಪೂಜಾ ಕೈಂಕರ್ಯಗಳಿಗೆ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ, ನೀರಿನ ಹರಿವು ಹೆಚ್ಚಾದರೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗುವುದು ಎಂದು ಅರ್ಚಕ ರಾಹುಲ್ ಪೂಜಾರಿ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.