ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ.
ಧಾರಾಕಾರ ಮಳೆಗೆ ಹುಕ್ಕೇರಿ ಪಟ್ಟಣ ತತ್ತರ: ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ - Heavy rain in Sunday at Hukkere
ಹುಕ್ಕೇರಿ ಪಟ್ಟಣದಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಮಾಸಾಬಿ ದರ್ಗಾಕ್ಕೆ ನೀರು ನುಗ್ಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಹುಕ್ಕೇರಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ
ಹುಕ್ಕೇರಿ ಪಟ್ಟಣದ ಮಾಸಾಬಿ ದರ್ಗಾಕ್ಕೆ ನೀರು ನುಗ್ಗಿದ್ದರೆ, ವಿದ್ಯುತ್ ಕಂಬಗಳು ಧರೆಗುರುಳಿವೆ. ಲಾರಿ, ಮತ್ತು ಕಾರುಗಳ ಮೇಲೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತವಾಗಿದೆ. ಗ್ಯಾರೇಜ್ ಛಾವಣಿ ಕುಸಿದು ಅಸ್ಲಂ ಅಲ್ಲಾಖಾನ (52) ಎಂಬುವರು ಮೃತಪಟ್ಟಿದ್ದಾರೆ.
ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಗೋಡೆ ಕುಸಿದಿದೆ. ಹುಕ್ಕೇರಿ ಪಟ್ಟಣದ 10 ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿದುಬಿದ್ದಿವೆ.
Last Updated : Oct 12, 2020, 12:22 PM IST